ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

Prathibha Karanji
Published on

ನವಲಗುಂದ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಪಾಲ್ಗೊಳ್ಳುವಂತೆ ಮಾಡಿ ಅವರ ಪ್ರತಿಭೆಗೆ ವೇದಿಕೆ ಒದಗಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಶಾಲಾ ಸುಧರಣಾ ಸಮಿತಿ ಅಧ್ಯಕ್ಷ ಫಕ್ಕೀರಗೌಡ ಪಾಟೀಲ ಹೇಳಿದರು.

ತಾಲೂಕಿನ ಶಿರೂರು ಗ್ರಾಮದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಂ-2ರಲ್ಲಿ ಗುಮ್ಮಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಉಮಾಶ್ರೀ ಕಾಳಿ ಕಾರ್ಯಕ್ರಮ ಉದ್ಘಾಟಿಸಿದರು.

ಶಂಕರಗೌಡ ಬಾಳನಗೌಡ್ರ,ಸಂಗನಗೌಡ ತೋಟದ, ಡಾ. ಭಾಗ್ಯಜ್ಯೋತಿ ಕೋಟಿಮಠ, ವೈ.ಬಿ. ಭಜಂತ್ರಿ, ಎಚ್.ಬಿ. ಗೋಕುಲ, ನಾಗಪ್ಪ ಪಟ್ಟಣದ, ನಾಗಪ್ಪ ಸಂಕದ, ಕಲ್ಲನಗೌಡ ದೇಸಾಯಿ, ಶಂಕರಗೌಡ ರಾಯನ ಗೌಡ್ರ, ಮಾದೇಗೌಡ ಬಾಳನ ಗೌಡ್ರ, ಮಹಾಂತೇಶ ಬೆನಕನ್ನವರ, ಯಲ್ಲಪ್ಪ ಗೋಕಾವಿ, ಮಲ್ಲಿಕಾರ್ಜುನಗೌಡ ಬಾಳನ ಗೌಡ್ರ, ಬಸಯ್ಯ ಶಿರಟ್ಟಿಮಠ ಕವಿತಾ ಬಡಿಗೇರ, ಬಾಳಪ್ಪ ಯಾದವಾಡ, ದ್ಯಾಮನಗೌಡ ಗೌಡ್ರ, ನಾಗಪ್ಪ ಯಮನೂರ, ಗದಿಗೆಪ್ಪ ಮೇಟಿ, ಮೈಲಾರಗೌಡ ಬಾಳನಗೌಡ್ರ, ರಾಯನಗೌಡ ರಾಯನಗೌಡ್ರು, ಬಸನಗೌಡ ಬಾಳನ ಗೌಡ್ರು, ವಿರೂಪಾಕ್ಷಪ್ಪ ಸಣ್ಣಮನಿ, ಮಂಜುಳಾ ಗುಡುಕಟ್ಟಿ, ಬಸಮ್ಮ ಚಕ್ಕಡಿ, ಶಶಿಕಲಾ ಕೊಪ್ಪದ, ರಾಜೇಶ್ವರಿ ಖಾನಗೌಡ ಮತ್ತಿತರರು ಇದ್ದರು.

ಸುರೇಶ ಸಂಗಟಿ ನಿರೂಪಿಸಿದರು. ಸುವರ್ಣ ಪವಾಡಿ ಶೆಟ್ಟರ ಸ್ವಾಗತ ಸ್ವಾಗತಿಸಿದರು. ಗಂಗಾಧರ ಸೂರ್ಯವಂಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net