

ಚಿಕ್ಕೋಡಿ: ಎಲ್ಲರನ್ನೂ ಸಮವಾಗಿ ಕಾಣುವ ಏಕೈಕ ವ್ಯಕ್ತಿ ಶಿಕ್ಷಕ. ಶಿಕ್ಷಣ ಪದ್ಧತಿಯಲ್ಲಿ ಗುರುಗಳ ಪಾತ್ರ ಅನನ್ಯವಾಗಿದೆ ಎಂದು ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಹೇಳಿದರು.
ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ಶಿಕ್ಷಣ ಅಭಿವೃದ್ಧಿಗೆ ಸರ್ಕಾರ ಸಮರ್ಪಕ ಅನುದಾನ ಒದಗಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಡಿಭಾಗದ ಶಾಲೆಗಳ ಪ್ರಗತಿಗೆ ಆದ್ಯತೆ ನೀಡಿದ್ದಾರೆ. ಚಿಕ್ಕೋಡಿ-ಸದಲಗಾ ಕ್ಷೇತ್ರದ ಐದು ಶಾಲೆಗಳನ್ನು ಉನ್ನತೀಕರಿಸಲಾಗಿದೆ. ಶಾಲೆಗಳಲ್ಲಿ ಮೂಲಸೌಕರ್ಯಕ್ಕಾಗಿ ೨೫ ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಕ್ಷೇತ್ರದಲ್ಲಿ ಎರಡು ಕೇಂದ್ರೀಯ ವಿದ್ಯಾಲಯ ಮತ್ತು ಆರು ಮುರಾರ್ಜಿ ವಸತಿ ಶಾಲೆ ಆರಂಭಿಸಲಾಗಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ, ಉಪನಿರ್ದೇಶಕ ಆರ್.ಎಸ್.ಸೀತಾರಾಮು ಮಾತನಾಡಿದರು. ಶೈಕ್ಷಣಿಕ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.
ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಸೀಲ್ದಾರ್ ರಾಜೇಶ ಬುರ್ಲಿ, ಡಿಡಿಪಿಯು ಪಿ.ಐ.ಭಂಡಾರಿ, ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ, ಬಿಇಒ ಪ್ರಭಾವತಿ ಪಾಟೀಲ, ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬ್ ಬಾಗವಾನ, ವರ್ತಕ ರವಿಂದ್ರ ಹಂಪನ್ನವರ, ಜಿಪಂ ಮಾಜಿ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ಎಸ್.ಎನ್.ಬೆಳಗಾವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ, ಶಿಕ್ಷಕರ ಸಂಘದ ಎನ್.ಜಿ.ಪಾಟೀಲ, ಜಿ.ಎಂ.ಕಾಂಬಳೆ, ವೈ.ಎಸ್.ಬುಡ್ಡಗೊಳ, ಎಸ್.ಎಸ್.ಧುಪದಾಳ, ಆರ್.ಕೆ.ಕಾಂಬಳೆ, ಡಿ.ಎಸ್.ಚಲವಾದಿ, ದಯಾನಂದ ಹಿರೇಮಠ, ಕಾವೇರಿ ಹಿಪ್ಪರಗಿ ಇತರರಿದ್ದರು. ಪ್ರಿಯಾ ತೇಲಿ, ಪ್ರೀತಿ ಕಾಂಬಳೆ ನಿರೂಪಿಸಿದರು.