ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

web3
ಚನ್ನಮ್ಮನ ಕಿತ್ತೂರಿನ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಡಾ. ಕೆ.ಆರ್. ಮೆಳವಂಕಿ, ಪ್ರೊ.ಚಂದ್ರಶೇಖರ ಗರಗದ, ನಾಗರಾಜ ಎಚ್.ಕೆ., ಸಂಗೀತಾ ತೋಲಗಿ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು: ಎಲ್ಲರ ಬದುಕಿನಲ್ಲೂ ಗುರುವಿನ ಪಾತ್ರ ಹಿರಿದು ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರಿಗೆ ಇರುವ ಉನ್ನತ, ಪವಿತ್ರ ಸ್ಥಾನ ಗುರುಗಳಿಗೂ ಇದೆ. ಗುರು ಬದುಕಿಗೆ ದಾರಿ, ಜೀವನಕ್ಕೆ ಶಕ್ತಿ ಎಂದು ಕನ್ನಡ ಹಿರಿಯ ಪ್ರಾಧ್ಯಾಪಕ ಡಾ. ಕೆ.ಆರ್. ಮೆಳವಂಕಿ ಹೇಳಿದರು.

ಸ್ಥಳೀಯ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಈಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು.

ಶಿಕ್ಷಕರು ಎಲ್ಲರ ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ. ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಶಕ್ತಿ ಎಂದರು. ಶಿಕ್ಷಣಶಾಸ್ತ್ರದ ಮುಖ್ಯಸ್ಥ ಪ್ರೊ.ಚಂದ್ರಶೇಖರ ಗರಗದ ಮಾತನಾಡಿ, ಉತ್ತಮ ಮನಸ್ಸುಗಳನ್ನು ರೂಪಿಸುವಲ್ಲಿ, ಪಠ್ಯಪುಸ್ತಕಗಳನ್ನು ಮೀರಿದ ಮೌಲ್ಯಗಳನ್ನು ಬೆಳೆಸುವಲ್ಲಿ ನಮ್ಮ ಶಿಕ್ಷಕರ ಪಾತ್ರ ಬಲು ದೊಡ್ಡದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನಾಗರಾಜ ಎಚ್.ಕೆ., ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದರು. ಆರ್.ಬಿ.ಹವಿನಾಳೆ, ರೆಡ್ ಕ್ರಾಸ್ ಘಟಕದ ಡಾ.ಬಿ. ಜಿ.ನಂದನ, ಎನ್‌ಸಿಸಿ ಅಧಿಕಾರಿ ಎಂ.ಜಿ.ಹಿರೇಮಠ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಂಗೀತಾ ತೋಲಗಿ, ರೇಂಜರ್ ಲೀಡರ್ ಪ್ರಿಯಾಂಕಾ ದಾಮೋಣೆ, ಗ್ರಂಥಪಾಲಕ ಸತೀಶ ಶಹಪುರಮಠ, ಪುಷ್ಪಾ ದೊಡಮನಿ, ವಿಜಯಲಕ್ಷ್ಮೀ ದಳವಾಯಿ, ಅನಿತಾ ಕಾದ್ರೋಳ್ಳಿ, ಚೈತ್ರಾ ಪಠಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net