ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

The role of teachers in building society is immense.
ತೇರದಾಳದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸರ್.ಎಂ. ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜ್ ಹಾಗೂ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಸಿದ್ಧೇಶ್ವರ ಉತ್ಸವ ಕಾರ್ಯಕ್ರಮದಲ್ಲಿ ಓಲೇಮಠದ ಆನಂದ ಶ್ರೀ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ, ಸಂಸ್ಥೆಯ ಶಂಕರ ಮಂಗಸೂಳಿ ಇತರರಿದ್ದರು.
Published on

ತೇರದಾಳ: ದೇಶದಲ್ಲಿ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳಷ್ಟಿದೆ ಎಂದು ಜಮಖಂಡಿ ಓಲೇಮಠದ ಆನಂದ ಶ್ರೀ ಹೇಳಿದರು.

ಇಲ್ಲಿನ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸರ್.ಎಂ. ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜ್ ಹಾಗೂ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಬಹಳಷ್ಟು ಅವಶ್ಯಕ ಇದೆ. ಆ ನಿಟ್ಟಿನಲ್ಲಿ ಸಂಸ್ಥೆಯವರು ವಿದ್ಯಾರ್ಥಿಗಳಲ್ಲಿ ತುಂಬಿರುವ ಸಂಸ್ಕಾರ ಶ್ಲಾಘನೀಯ ಎಂದರು.

ಬನಹಟ್ಟಿ ಎಸ್‌ಟಿಸಿ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಡಾ. ಸಂಗಮೇಶ ಮಟೋಳಿ, ಜಾಗತಿಕ ಮಟ್ಟದಲ್ಲಿ ಇಂದು ಶಿಕ್ಷಣ ತನ್ನದೆಯಾದ ಸದ್ದು ಮಾಡುತ್ತಿದೆ. ಶಿಕ್ಷಣ ಬದುಕಿನ ಸಂಜೀವಿನಿಯಾಗಿದೆ. ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಮಾತನಾಡಿದರು. ಸಿಬಿಎಸ್‌ಇ ಚೇರ್ಮನ್ ಶಂಕರ ಮಂಗಸೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಡಾ. ಶಂಕರ ಅಥಣಿ ಅಧ್ಯಕ್ಷತೆ ವಹಿಸಿದ್ದರು.

ಚೇರ್ಮನ್ ಮಹೇಶ ಯಾದವಾಡ, ಪ್ರವೀಣ ನಾಡಗೌಡ, ಸಿಆರ್‌ಸಿ ಅನಂತ ಮುಧೋಳ, ರಮೇಶ ಅವರಾದಿ, ಮಲ್ಲಪ್ಪ ಮುಕರಿ, ರವಿ ಅವರಾದಿ, ಬಸವರಾಜ ಬಾಳಿಕಾಯಿ, ಶಿವಾನಂದ ನಿವರಗಿ, ಪರಪ್ಪ ಕಾಲತಿಪ್ಪಿ, ಪರಪ್ಪ ಅಥಣಿ, ಆಡಳಿತಾಧಿಕಾರಿ ಎಂ.ಬಿ. ಮಾಳೇದ, ಪ್ರಾಚಾರ್ಯ ಜಾಯ್ ಸಿಬಸ್ಟ್‌ನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net