ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು

4manju5
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ಜರುಗಿದ ಸಮಾರೋಪ ಸಮಾರಂಭದಲ್ಲಿ ಶಾಸಕ ಆಸೀಫ್​ ಸೇಠ್​ ಮಾತನಾಡಿದರು. ಎಸ್​. ಎಲ್​. ಭೀಮನಾಯ್ಕ, ವಾಸುದೇವ ಅಪ್ಪಾಜಿಗೋಳ, ಕಿರಣಕುಮಾರ ಎಮ್​.ಟಿ, ರಮೇಶ ನಾಡಗೌಡರ ಇತರರಿದ್ದರು.
Published on

ಬೆಳಗಾವಿ: ವಿದ್ಯಾರ್ಥಿಗಳು ಜೀವನಕ್ಕೆ ಮಾತ್ರವಲ್ಲದೇ ದೇಶ, ಸಮಾಜದ ಅಭಿವೃದ್ಧಿಗೆ ಶಿಣ ಪಡೆಯುವ ಗುರಿ ಹೊಂದಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದ್ದು, ತಮ್ಮ ಪರಿಶ್ರಮದಿಂದ ಶಿಣ ಪಡೆದು ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಆಸೀಫ್​ ಸೇಠ್​ ಹೇಳಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ಜರುಗಿದ ಸರ್ಕಾರಿ ಪಾಲಿಟೆಕ್ನಿಕ್​ 2024&25ರ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 20 ಕಂಪ್ಯೂಟರ್​ಗಳನ್ನು ಶಾಸಕರ ಅನುದಾನದಿಂದ ಬಿಡುಗಡೆ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಂದ ಶೈಣಿಕವಾಗಿ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ನಿವೃತ್ತ ಎಇಇ ಎಸ್​.ಎಲ್​.ಭೀಮನಾಯ್ಕ, ಸರ್ಕಾರಿ ಪಾಲಿಟೆಕ್ನಿಕ್​ ಪ್ರಾಚಾರ್ಯ ವಾಸುದೇವ ಅಪ್ಪಾಜಿಗೋಳ, ಕಿರಣಕುಮಾರ ಎಮ್​.ಟಿ, ರಮೇಶ ನಾಡಗೌಡರ, ಮಲ್ಲಿಕಾರ್ಜುನ ಗಚ್ಚಣ್ಣವರ, ವಿದ್ಯಾಧರ ಲಾಟಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net