ದೇಶ ರಕ್ಷಣೆಗೆ ಸೈನಿಕರ ಪಾತ್ರ ಪ್ರಮುಖ

The role of soldiers is important for the defense of the country
ಬೀಳಗಿ ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕಲ್ಮಠದ ಗುರುಪಾದ ಶ್ರೀಗಳು, ಲಕ್ಷ್ಮಣ ಮಹಾರಾಜರು, ಸಂಘದ ಅಧ್ಯಕ್ಷ ಎಂ.ಎಸ್. ಕೋಮಾರದೇಸಾಯಿ ಇದ್ದರು.
Published on

ಬೀಳಗಿ: ನಮ್ಮ ದೇಶ ಕಾಯುವ ಸೈನಿಕರು ಹಾಗೂ ಅನ್ನ ನೀಡುವ ರೈತರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಹೇಳಿದರು.

ಸ್ಥಳೀಯ ತಾಲೂಕು ಆಡಳಿತ ಮಿನಿ ವಿಧಾನ ಸೌಧದ ಆವರಣದಲ್ಲಿ ಪಟ್ಟಣದ ಜೈ ಜವಾನ್ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಸೈನಿಕರ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ದೇಶದ ರಕ್ಷಣೆಗೆ ನಮ್ಮ ಲಕ್ಷಾಂತರ ಸೈನಿಕರು ಪ್ರಾಣಬಿಟ್ಟರು. ಅವರಿಂದಲೇ ನಾವೇಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ. ಗಡಿಯಲ್ಲಿ ಹಗಲು ರಾತ್ರಿ ಎನ್ನದೇ ಶತ್ರುಗಳಿಂದ ದೇಶ ಕಾಯುತ್ತಿರುವ ಸೈನಿಕರ ತ್ಯಾಗ ಮರೆಯಬಾರದು ಎಂದರು.

ವಿಶ್ರಾಂತ ಪ್ರಾಂಶುಪಾಲ ಡಾ. ಸಾಗರ ತೆಕ್ಕನ್ನವರ ಉಪನ್ಯಾಸ ನೀಡಿ, ಕಾರ್ಗಿಲ್ ಯುದ್ಧವನ್ನು ನೇರವಾಗಿ ಮಾಡಲು ಸಾಧ್ಯವಿಲ್ಲವೆಂದು ಮನಗಂಡ ಪಾಕಿಸ್ತಾನಿ ಉಗ್ರರು ಹಿಂದಿನಿಂದ ಯದ್ಧ ಮಾಡುವ ಕೆಲಸಕ್ಕೆ ಮುಂದಾಗಿತ್ತು. ಆದರೆ, ನಮ್ಮ ಸೈನಿಕರು ತಮ್ಮ ಕುಟುಂಬವನ್ನೇ ಲೆಕ್ಕಿಸದೇ ದೇಶದ ರಕ್ಷಣೆಗೆ ಮುಂದಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ವೀರ ಸಾಹಸಿಗಳ ಪೈಕಿ ಕೆಲವರು ಹುತಾತ್ಮರಾದರು. ಇನ್ನು ಕೆಲವರು ಅಂಗವಿಕಲರಾದರು. ಹೀಗಿದ್ದರೂ ತನ್ನ ಪಕ್ಕದಲ್ಲಿಯೇ ಹೆಣವಾಗುತ್ತಿದ್ದ ಸಹ ಯೋಧರ ನಡುವೆ ಬಹಳಷ್ಟು ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಸಂಹರಿಸಿದ್ದರಿಂದ ಇಂದು ನಾವೆಲ್ಲರೂ ಹೆಮ್ಮೆಯಿಂದ ಕಾರ್ಗಿಲ್ ದಿನ ಆಚರಿಸುವಂತಾಗಿದೆ ಎಂದರು.

ಕಲ್ಮಠದ ಗುರುಪಾದ ಶಿವಾಚಾರ್ಯರು, ಕುಂದರಗಿ-ಸುರಗಿರಿ ಬೆಟ್ಟದ ಲಕ್ಷ್ಮಣ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಕೋಮಾರದೇಸಾಯಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಂತಾಬಾಯಿ ರಾ. ತೇಲಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಎನ್.ಸಿ.ಸಿ. ಬಟಾಲಿಯನ್ ಮುಖಸ್ಥ ಸುಬೇದಾರ ಮೇಜರ್ ಮಜ್ಜೀಂದ್ರ ಗೋವಿಂದ ಪಾಟೀಲ, ಮುಖಂಡರಾದ ಮೀಹನ ಜಾಧವ, ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ಡಾ. ಶಿವಪ್ಪ ತೇಲಿ, ಜಿಲ್ಲಾಧ್ಯಕ್ಷ ಗದಗೆಪ್ಪ ಅರಕೇರಿ, ಸಂಘದ ಉಪಾಧ್ಯಕ್ಷ ಎಸ್.ಡಿ. ಚೌಕಿಮಠ, ಎಂ.ಎಂ. ತಾಂಬೋಳಿ, ರಾಮು ಕಾಂಬಳೆ ಇತರರಿದ್ದರು.

25ನೇ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net