ದೇಶ ಕಟ್ಟುವಲ್ಲಿ ಶಿಲ್ಪಿಗಳ ಪಾತ್ರ ಹಿರಿದು

20sor3
ಸೊರಬದಲ್ಲಿ ಯುವ ಬ್ರಿಗೇಡ್‌ನಿಂದ ಶಿಲ್ಪಿಗಳಾದ ರಾಘವೇಂದ್ರ ಡಿ ನಡಹಳ್ಳಿ, ಭರತ್, ರಾಘವೇಂದ್ರ ಆಚಾರಿ, ರಾಜು ಆಚಾರಿ ಅವರನ್ನು ಸನ್ಮಾನಿಸಲಾಯಿತು.
Published on

ಸೊರಬ: ದೇಶದ ಜನರೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವ ಕಾರ್ಯ ಶಿಲ್ಪಿಗಳಿಂದಾಗುತ್ತಿದೆ. ಜನರನ್ನು ದೇವಸ್ಥಾನಗಳ ಕಡೆ ಆಕರ್ಷಿಸುವ ಕಲೆಯನ್ನು ಮೈಗೂಡಿಸಿಕೊಂಡಿರುವ ಶಿಲ್ಪಿಗಳ ಕಾರ್ಯ ದೊಡ್ಡದು ಎಂದು ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್ ಹೇಳಿದರು.
ಪಟ್ಟಣದ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಯುವಾ ಬ್ರಿಗೇಡ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಿಗಳನ್ನು ಸನ್ಮಾನಿಸಿ ಮಾತನಾಡಿ, ಪ್ರತಿವರ್ಷ -ೆಬ್ರವರಿ ತಿಂಗಳಿನಲ್ಲಿ ಮೈ ಲವ್ ಮೈ ನೇಷನ್ ಎನ್ನುತ್ತಾ ಒಂದಷ್ಟು ಜನರನ್ನು ಯುವ ಬ್ರಿಗೇಡ್ ಸನ್ಮಾನಿಸುತ್ತದೆ. ಪೌರಕಾರ್ಮಿಕರು, ಪವರ್‌ಮೆನ್, ಆಶಾ ಕಾರ್ಯಕರ್ತೆಯರು, ಅಂಚೆ ಅಣ್ಣಂದಿರು, ಪುರೋಹಿತರನ್ನು ಸಂಘದಿAದ ಸನ್ಮಾನಿಸಲಾಗಿದೆ ಎಂದರು.
ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ, ಲೋಕೇಶ್, ಆಶಿಕ್ ನಾಗಪ್ಪ, ಸೋದರಿ ನಿವೇದಿತಾ ಪ್ರತಿಷ್ಠಾನದ ರೂಪಾ ಮಧುಕೇಶ್ವರ್, ಸತೀಶ್ ಬೈಂದೂರ್, ಶ್ರೇಯಸ್, ಸಂಗೀತಾ ರಾಘವೇಂದ್ರ, ಶಿಲ್ಪಿಗಳಾದ ರಾಘವೇಂದ್ರ ಡಿ ನಡಹಳ್ಳಿ, ಭರತ್ ಎಸ್, ರಾಘವೇಂದ್ರ ಆಚಾರಿ, ರಾಜು ಆಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net