

ಚಿಕ್ಕೋಡಿ: ಕನ್ನಡ ಭಾಷೆ ಉಳಿಸುವಲ್ಲಿ ಗ್ರಾಮೀಣ ಜನಪದ ಕಲಾವಿದರ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸತ ಶಿಕ ಎಸ್.ಆರ್.ಡೊಂಗರೆ ಹೇಳಿದರು.
ತಾಲೂಕಿನ ಧುಳಗಣವಾಡಿ ಗ್ರಾಮದಲ್ಲಿ ಭಾನುವಾರ ಶರಣರ ಕಲಾಸೇವಾ ಮಂಡಳ ಖೋತ ಪರಿವಾರ ಧುಳಗನವಾಡಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 110ನೇ ಸುವಿಚಾರ ಚಿಂತನಗೋಷ್ಟಿ ಹಾಗೂ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಾವಿದ ಹಳ್ಳಿಯ ಸೊಗಡಿನ ಪರಂಪರೆ ತತ್ತ$್ವಪದ, ಡೊಳ್ಳಿನಪದ, ಗೀಗೀಪದ, ಜಾನಪದ ಹಾಡುವುದರಿಂದ ಕನ್ನಡ ಭಾಷೆ ರಸಸ್ವಾದವಾಗಿ ಹೊರಹೊಮ್ಮುತ್ತದೆ. ಅಂತಹ ಭಾಷೆಗೆ ಕಲಾವಿದರು ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.
ಸಾವಿತ್ರಿ ವಿಜಯನಗರೆ ಮಾತನಾಡಿದರು. ವೀರಗಾಸೆ ಜಾನಪದ ಕಲಾವಿದ ಅಣ್ಣಪ್ಪ ಖಡ್ಡ ನವಲಿಹಾಳ ಹಾಗೂ ಕಿರಣ ವಿಜಯನಗರೆ ಖಡಕಲಾಟ ಅವರನ್ನು ಸನ್ಮಾನಿಸಲಾಯಿತು.
ಕಲ್ಲಪ್ಪ ಜನವಾಡೆ, ಅಪ್ಪಾಸಾಬ ಖೋತ, ವಿಜಯ ವಾಮಾರೆ ಇತರರಿದ್ದರು.
ಮಹೇಶ ಪಕಾಲೆ, ಸಂತ್ರಾಮ ಕಾಂಬಳೆ ವಾದ್ಯ ಸಹಕಾರ ನೀಡಿದರು. ಶರಣ ಧನಪಾಲ ಕಮತೆ ಪ್ರಸ್ತಾವಿಕವಾಗಿ ಮಾತನಾಡಿದರು. ಓಂಕಾರ ಖೋತ ಸ್ವಾಗತಿಸಿದರು. ಭರತ ಕಲಾಚಂದ್ರ ನಿರೂಪಿಸಿದರು. ಸುಜಾತಾ ಮಗದುಮ್ಮ ವಂದಿಸಿದರು.