ವಿದ್ಯಾರ್ಥಿಗಳ ಕಲಿಕೆಯಲ್ಲಿ ಪಾಲಕರ ಪಾತ್ರ ಮುಖ್ಯ

15hgr1
ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
Published on

ಹಲಗೂರು: ವಿದ್ಯಾರ್ಥಿಗಳ ಕಲಿಕೆಗೆ ಪಾಲಕರು, ಶಿಕ್ಷಕರ ಪಾತ್ರ ಮಹತ್ವದಾಗಿದೆ. ಅವರ ಸಹಕಾರ, ಸಲಹೆಗಳು ಇದ್ದರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಿವೃತ್ತ ಶಿಕ್ಷಕ ಚಂದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ದಳವಾಯಿ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಳೆಯ ವಿದ್ಯಾರ್ಥಿಗಳ ಸಂಘದ ಕೊಠಡಿ ಉದ್ಘಾಟಿಸಿ ಮಾತನಾಡಿ, ನಾನು ಈ ಶಾಲೆಯಲ್ಲಿ 12 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇತ್ತು, ಈಗ ಕಡಿಮೆಯಾಗಿದೆ. ಪಾಲಕರು ಮಕ್ಕಳ ವ್ಯಾಸಂಗಕ್ಕೆ ಸಹಕರಿಸಬೇಕು, ಅವರು ಶಾಲೆಗೆ ದಿನನಿತ್ಯ ಹೋಗುತ್ತಿದ್ದಾರೆಯೇ ತಿಳಿದು ಗಮನಹರಿಸಬೇಕು. ಶಾಲೆಗೆ ಭೇಟಿ ನೀಡಿ ನಿಮ್ಮ ಮಕ್ಕಳ ಬಗ್ಗೆ ಶಿಕ್ಷಕರಲ್ಲಿ ವಿಚಾರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಶಾಲೆಗೆ ಬರದಿದ್ದ ಪಕ್ಷದಲ್ಲಿ ಅವರ ಪಾಲಕರಿಗೆ ಶಿಕ್ಷಕರು ವಿಷಯ ತಿಳಿಸಿ, ಹಾಜರಾತಿ ಬಗ್ಗೆ ಗಮನಹರಿಸಬೇಕು. ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಮಾಡಿದರೆ, ವಿಶೇಷ ತರಗತಿ ನಡೆಸಿದರೆ ಹೆಚ್ಚು ಆಸಕ್ತಿ ಬರಲಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು ಮಾತನಾಡಿ, ಶಿಕ್ಷಕರು ನಿಮ್ಮ ಭವಿಷ್ಯವನ್ನು ರೂಪಿಸಲು ಭಾನುವಾರವೂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಪಾಠ ಪ್ರವಚನ ಮಾಡುತ್ತಿದ್ದಾರೆ. ಆದರೆ ನೀವು ಶಾಲೆಗೆ ಬಾರದೆ ಮನೆ ಕೆಲಸದಲ್ಲಿ ತೊಡಗುವುದು ಸರಿ ಅಲ್ಲ. ನಿಮ್ಮಲ್ಲಿ ಛಲ ಹಾಗೂ ಗುರಿ ಇರಬೇಕು. ಆಗ ಮಾತ್ರ ನೀವು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹಳೆಯ ವಿದ್ಯಾರ್ಥಿಗಳು ಈಗಿನ ಶಿಕ್ಷಕರ ಜತೆ ಕೈಜೋಡಿಸುತ್ತೇವೆ. ಪಕ್ಕದ ಗ್ರಾಮಗಳಾದ ಗುಂಡಾಪುರ, ನಂದೀಪುರ, ಬಸಾಪುರ, ಬಾಳೆಹೊನ್ನಿಗ, ಕೆಂಪಯ್ಯನ ದೊಡ್ಡಿ ಮತ್ತು ಇತರ ಗ್ರಾಮಗಳಲ್ಲಿರುವ 7ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರ ಮನವೊಲಿಸಿ, ನಮ್ಮ ಶಾಲೆಯಲ್ಲೂ ಉನ್ನತ ಶಿಕ್ಷಕರಿಂದ ಬೋಧನೆ ಸಿಗುತ್ತಿದೆ ಎಂಬ ವಿಶ್ವಾಸ ಮೂಡಿಸಿ, ಈ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸೋಣ ಎಂದು ಕರೆ ನೀಡಿದರು.

ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ನಾಗವೇಣಿ, ಸಹ ಶಿಕ್ಷಕರಾದ ರುಷಿದಾಖಾನ್, ಮೈತ್ರಿ, ರಂಜಿತಾ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಗೌಡ, ಜಯರಾಮು, ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ತಮ್ಮಣ್ಣೇಗೌಡ, ಉಪಾಧ್ಯಕ್ಷ ರವೀಶ, ಕಾರ್ಯದರ್ಶಿ ಶಿವರಾಜು, ಗೌರವಾಧ್ಯಕ್ಷ ರಾಜೇಶ್ವರ, ಸಂಘದ ಸಂಘಟನೆಗಾರ ಶ್ರೀನಿವಾಸ, ಸದಸ್ಯರಾದ ಪ್ರವೀಣ, ಮಹೇಶ, ಬಸವಲಿಂಗ, ತೇಜಸ್ಸು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net