ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮುಖ್ಯ

13 bannur 1
ಬನ್ನೂರಿನ ಸಮೀಪದ ಬೀಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಎಚ್.ಬಿ.ಮಮತಾ, ಮಂಗಳಾ, ವಿಷಕಂಠೇಗೌಡ, ಪ್ರಸನ್ನ, ಚಂದ್ರಮ್ಮ, ಮಂಜುಳಾ, ನಂದೀಶ್, ಕೃಷ್ಣೇಗೌಡ, ರಾಜೇಶ್, ಹರಿಪ್ರಸಾದ್, ನಾಗಾರ್ಜುನ ಭಾಗವಹಿಸಿದ್ದರು.
Published on

ಬನ್ನೂರು: ಮಕ್ಕಳ ವಿದ್ಯಾಭ್ಯಾಸದ ಬೆಳವಣಿಗೆಯಲ್ಲಿ ಶಿಕ್ಷಕ ಹಾಗೂ ಪಾಲಕರ ಪಾತ್ರ ಮುಖ್ಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಮಂಗಳಾ ತಿಳಿಸಿದರು.

ಪಟ್ಟಣದ ಸಮೀಪದ ಬೀಡನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳು ಕಲಿಕೆಯಲ್ಲಿ ಬೆಳವಣಿಗೆಯಾದಾಗ ಮಾತ್ರ ಏನಾದರೂ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ವಾರ್ಷಿಕೋತ್ಸವದಂತ ಕಾರ್ಯಕ್ರಮಗಳು ಮಕ್ಕಳಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನಿರ್ಮಾಣ ಮಾಡುವುದರ ಜತೆಗೆ ಮಕ್ಕಳಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತ ಧೈರ್ಯವನ್ನು ತಂದುಕೊಡುತ್ತದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಎಚ್.ಬಿ.ಮಮತಾ ಮಾತನಾಡಿ, ಮಕ್ಕಳನ್ನು ಕಡ್ಡಾಯವಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು. ಖಾಸಗಿ ಶಾಲೆಗೆ ಯಾವುದರಲ್ಲಿ ಕಮ್ಮಿ ಇಲ್ಲದಂತೆ ನಮ್ಮ ಶಾಲೆಯು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಉತ್ತಮ ಫಲಿತಾಂಶ ಬರುತ್ತಿದೆ ಎಂದು ತಿಳಿಸಿದರು.

ಈ ಶಾಲೆಯ ಅಭಿವೃದ್ಧಿಗೆ ಹಲವಾರು ಜನರು ಶ್ರಮಿಸುತ್ತಿದ್ದು, ಮಕ್ಕಳಿಗೆ ಕಂಪ್ಯೂಟರ್ ಸೇರಿದಂತೆ ಪ್ರೊಜೆಕ್ಟರ್ ಮಾದರಿಯ ಶಿಕ್ಷಣವನ್ನು ನಮ್ಮ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರಾದ ವಿಷಕಂಠೇಗೌಡ, ಪ್ರಸನ್ನ, ಚಂದ್ರಮ್ಮ, ಬೀಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ನಂದೀಶ್, ಕೃಷ್ಣೇಗೌಡ, ರಾಜೇಶ್, ಹರಿಪ್ರಸಾದ್, ನಾಗಾರ್ಜುನಾ, ಹೈಸ್ಕೂಲ್ ಶಿಕ್ಷಕಿ ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net