ಶಿಸ್ತು ರೂಪಿಸುವಲ್ಲಿ ಪತ್ರಿಕೆ ಪಾತ್ರ ಮಹತ್ವ

Gajendragada
Published on

ಗಜೇಂದ್ರಗಡ: ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರತಿ ಮನೆಯಲ್ಲೂ ಪತ್ರಿಕೆ ತೆಗೆದುಕೊಳ್ಳವ ಮೂಲಕ ಪತ್ರಿಕಾರಂಗವನ್ನು ಬಲಪಡಿಸಬೇಕು ಎಂದು ಉಪನ್ಯಾಸಕ ಅರವಿಂದ ವಡ್ಡರ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಹಾಗೂ ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ಸಮಾಜದಲ್ಲಿ ಶಿಸ್ತು, ನಡೆ-ನುಡಿಗಳನ್ನು ರೂಪಿಸುವಲ್ಲಿ ಪತ್ರಿಕೆ ಪಾತ್ರ ಮಹತ್ವವಾದುದು. ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಜನ ನಂಬುತ್ತಾರೆ. ಹೀಗಾಗಿ, ಸಮಾಜ ಹಾಗೂ ರಾಷ್ಟ್ರವನ್ನು ಮುನ್ನಡೆಸುವ ಅಂಶಗಳಿಗೆ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ರಜನಿಕಾಂತ ಕೆಂಗೇರಿ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದುವ ಪತ್ರಕರ್ತರು ಅಂಕು-ಡೊಂಕಾಗಿ ನಡೆಯದೆ ಜನರ ಹಕ್ಕುಗಳ ರಕ್ಷಣೆಗೆ ಮುಂದಾಗಲಿ ಎಂದರು.

ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಕಾಲೇಜು ಪ್ರಾಚಾರ್ಯ ಜಿ.ಬಿ.ಗುಡಿಮನಿ, ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಕುಂಬಾರ ಮಾತನಾಡಿದರು. ಪತ್ರಕರ್ತರಾದ ಪ್ರಭುಸ್ವಾಮಿ ಅರವಟಿಗಿಮಠ, ರವಿಂದ್ರ ಹೊನವಾಡ, ಡಿ.ಜಿ. ಮೋಮೀನ್, ಚನ್ನು ಸಮಂಗಡಿ, ಆದರ್ಶ ಕುಲಕರ್ಣಿ, ಮಂಜುನಾಥ ರಾಠೋಡ, ಪ್ರಾಣೇಶ ಕೊಡಗಾನೂರ, ಎಸ್.ಎಂ. ಸೈಯದ್, ಶಿವಕುಮಾರ ಶಶಿಮಠ, ನಿಂಗಪ್ಪ ಮಡಿವಾಳರ, ಫಿರೋಜ ಮೋಮೀನ ಹಾಗೂ ಎಸ್.ಕೆ. ಕಟ್ಟಿಮನಿ, ವಿ.ಎಂ. ಜೂಚನಿ, ಸಂತೋಷ ವಾಲಿಕಾರ, ಎಂ.ಎಲ್. ಕ್ವಾಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net