ಇಂಜಿನಿಯರ್ ಪಾತ್ರ ಪ್ರಮುಖ

VJP-14-1
ವಿಜಯಪುರದ ಆರ್‌ಕೆಎಂ ಆಸ್ಪತ್ರೆಯಲ್ಲಿ ‘ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ದಶಮಾನೋತ್ಸವ ಹಾಗೂ ಇಂಜಿನಿಯರ್ಸ್ ಡೇ ನಿಮಿತ್ತ ರಕ್ತದಾನ ಶಿಬಿರ ನಡೆಯಿತು. ಶಂಭುಲಿಂಗಯ್ಯ ಕರ್ಪೂರಮಠ, ಅರುಣ ಮಠ ಮತ್ತಿತರರಿದ್ದರು.
Published on

ವಿಜಯಪುರ : ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖ ಎಂದು ಶಂಭುಲಿಂಗಯ್ಯ ಕರ್ಪೂರಮಠ ಹೇಳಿದರು.

ನಗರದ ಆರ್‌ಕೆಎಂ ಆಸ್ಪತ್ರೆ ಆವರಣದಲ್ಲಿ ಬುಧವಾರ ‘ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ದಶಮಾನೋತ್ಸವ ಹಾಗೂ ಇಂಜಿನಿಯರ್ಸ್ ಡೇ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದುವಲ್ಲಿ ಆ ದೇಶದ ಇಂಜಿನಿಯರ್‌ಗಳ ಪಾತ್ರ ಮುಖ್ಯವಾಗಿರುತ್ತದೆ. ಪ್ರತಿಭಾ ಪಲಾಯನ ಮಾಡದೇ ಎಲ್ಲ ಇಂಜಿನಿಯರ್‌ಗಳು ದೇಶದ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ತೊಡಿಸಿಕೊಳ್ಳಬೇಕು ಎಂದರು.

ಪೈಪೋಟಿಯ ಈ ದಿನಗಳಲ್ಲಿ ಇಂಜಿನಿಯರ್‌ಗಳು ತಮ್ಮ ಆರೋಗ್ಯದೆಡೆ ಗಮನಹರಿಸುವುದು ಕೂಡ ಅಷ್ಟೇ ಅವಶ್ಯಕ ಎಂದರು.

ಎಸಿಸಿಇ ಅಧ್ಯಕ್ಷ ಅರುಣ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾಕ್ಟರ್ ಮೋಹಿತೆ ಮತ್ತು ಡಾಕ್ಟರ್ ರುದ್ರಗೌಡರ ಆರೋಗ್ಯ ತಪಾಸಣೆಯ ಮಹತ್ವ ಮತ್ತು ರಕ್ತದಾನದ ಮಹತ್ವ ಕುರಿತು ಮಾತನಾಡಿದರು.

ಅಭಿಯಂತರ ಸುಭಾಷ ಜಂಬೂರ ಕಾರ್ಯಕ್ರಮ ನಿರ್ವಹಿಸಿದರು. 50ಕ್ಕಿಂತ ಅಧಿಕ ಜನ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net