

ಅಥಣಿ: ಗುರುವಿಗೆ ಸಿಗುವ ಸ್ಥಾನಮಾನ ಯಾರಿಗೂ ಸಿಗಲು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳನ್ನು ಸರಿ ಸಮಾನವಾಗಿ ಕಾಣುವ ಮನೋಭಾವನೆ ಗುರುವಿನಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದರು.
ಇಲ್ಲಿನ ಗುಜರಾತಿ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.
ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಪ್ರತಿಯೊಬ್ಬರ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ ಭವಿಷ್ಯದ ನಾಯಕರನ್ನಾಗಿಸಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಬುಲಬುಲೆ ಮಾತನಾಡಿ, ಪ್ರತಿಭಾವಂತ ಶಿಕ್ಷಕರಿಗೆ ತಾಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಡಾ.ಮಹೇಶ ಕಾಪಸಿ ಮಾತನಾಡಿದರು. ೨೦ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯದರ್ಶಿ ವಿನೋದ ಕಲಮಡಿ, ಸಂಗಮೇಶ ಮಮದಾಪುರ, ಅಮಿತ್ ಮಹಾಜನ, ಸಂಜುಕುಮಾರ ಗುಂಜಿಗಾವಿ, ಗುರುಪುತ್ರ ಪಾಟೀಲ, ಶಶಿಧರ ಸಂಕ್ರಟ್ಟಿ, ಆದಿನಾಥ ಚೌಗಲಾ, ಅಭಿನಂದನ ಪಡನಾಡ, ಮೋಹನ ಕಾಂಬಳೆ, ಬಸವರಾಜ ಬಾವನ್ನವರ, ಮಂಜುನಾಥ ಬಡಿಗೇರ, ಬಿ.ಡಿ.ನಾಯಿಕ, ಸಚಿನ ಬುಟಾಳಿ, ಚಿದಾನಂದ ನರಗಟ್ಟಿ, ಶಶಿಕಾಂತ ಹುಲಕುಂದ, ಅನಿಲ ಪಾಟೀಲ, ಕಿರಣ ಸಿರಗುಪ್ಪಿ, ಭರತ ಸೊಮಯ್ಯ, ಸೌರಭ ಬುಕಿಟಗಾರ, ರವಿ ಬಡಕಂಬಿ, ಭೀಮಪ್ಪ ಕೋಳಿ ಇತರರು ಇದ್ದರು.