ಮಕ್ಕಳ ತಿದ್ದುವಲ್ಲಿ ತಾಯಿ ಪಾತ್ರ ಅಪಾರ

The role of a mother in correcting children is immense.
ಬನಹಟ್ಟಿ ಕೆಎಚ್‌ಡಿಸಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ತಾಯಂದಿರ ಆಟೋಟಗಳ ಸ್ಪರ್ಧೆಗಳಲ್ಲಿ ಹೇಮಾ ಜೀರಂಕಲಗಿ, ಶೈಲಾ ಬುರ್ಲಿ, ಸವಿತಾ ಕಿತ್ತೂರ, ಶೀಲಾ ಹಿಪಲಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಹೆಣ್ಣು ಮಕ್ಕಳು ಅಬಲೆಯರಲ್ಲ, ಮಕ್ಕಳನ್ನು ತಿದ್ದಿ ತೀಡುವ ಪ್ರಮುಖ ಪಾತ್ರಧಾರಿಗಳು. ತಾಯಿ ಮನಸ್ಸು ಮಾಡಿದರೆ ಮಕ್ಕಳ ಬದುಕನ್ನು ಬದಲಾಯಿಸಬಹುದು ಎಂದು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೈಲಾ ಬುರ್ಲಿ ತಿಳಿಸಿದರು.

ಬನಹಟ್ಟಿ ಕೆಎಚ್‌ಡಿಸಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ತಾಯಂದಿರ ಆಟೋಟ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆ ತಾಯಿ, ತಂಗಿ, ಹೆಂಡತಿ, ಮಗಳಾಗಿ ಮನೆಯ ಜವಾಬ್ದಾರಿ ನಿರ್ವಹಿಸುವುದರ ಜತೆಗೆ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಯ ಶಿಖರಕ್ಕೆ ಏರುತ್ತಿದ್ದಾಳೆ ಎಂದರು.

ಶಿಕ್ಷಕಿ ವಿದ್ಯಾ ಆಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯ ಗುರುಮಾತೆ ಬಿ.ವಿ. ತೆಗ್ಗಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ತುಂಬ ಗೌರವದ ಸ್ಥಾನವಿದೆ. ಮಹಿಳೆಯರು ಸಂಸ್ಕೃತಿ, ಸಂಪ್ರದಾಯಗಳ ಹರಿಕಾರರು ಎಂದರು.

ತಾಯಿ ಮಕ್ಕಳ ಕಣ್ಣು ಮುಚ್ಚಾಲೆ ಆಟ, ಸಂಗೀತ ಕುರ್ಚಿ, ಸೀರೆ ಉಡಿಸುವುದು ಮತ್ತು ಮೇಕಪ್ ಮಾಡುವುದು, ಪಾಸಿಂಗ್ ದ ಬಾಲ್, ಹಣೆ ಮೇಲೆ ಬಿಸ್ಕತ್ ಇಟ್ಟುಕೊಂಡು ತಿನ್ನುವುದು ಮತ್ತಿತರ ಆಟಗಳು ಮಹಿಳಾ ದಿನಾಚರಣೆಗೆ ಮೆರುಗು ನೀಡಿದವು.

ಹೇಮಾ ಜೀರಂಕಲಗಿ, ಸವಿತಾ ಕಿತ್ತೂರ, ಶೀಲಾ ಹಿಪಲಿ, ಚಂದ್ರಕಾಂತ್ ಜೈನಾಪುರ, ಮುಜರಿನ್ ಮುಲ್ಲಾ, ಜ್ಯೋತಿ ಕೆರೂರ, ಸಂತೋಷ ಮಠಪತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net