ರಾಕ್ ಬಾಯ್ಸ ತಂಡ ಗೆಲುವು

ರಾಕ್ ಬಾಯ್ಸ ತಂಡ ಗೆಲುವು
Published on

ಸೋಮವಾರಪೇಟೆ: ತಾಲೂಕಿನ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಗೌರಿ-ಗಣೇಶ ಚತುರ್ಥಿಯ ಪ್ರಯುಕ್ತ ಶನಿವಾರ ಆಯೋಜಿಸಲ್ಪಟ್ಟ ಕಿರಗಂದೂರು ಪಂಚಾಯಿತಿ ಮಟ್ಟದ ಲೀಗ್ ಮಾದರಿಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೀರ್ತಿ ಪೊನ್ನಪ್ಪ ನಾಯಕತ್ವದ ರಾಕ್ ಬಾಯ್ಸ ತಂಡ ಗೆಲುವು ಸಾಧಿಸಿತು.

ಕೆ.ಡಿ.ರಕ್ಷ್ಷಿತ್ ನಾಯಕತ್ವದ ಜಾಲಿ ಬಾಯ್ಸ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಒಟ್ಟು 10 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಒಂದು ತಂಡದಲ್ಲಿ 5*2 ಆಟಗಾರರಂತೆ ಪಂದ್ಯಾಟ ನಡೆಸಲಾಯಿತು.
ತೀರ್ಪುಗಾರರಾಗಿ ಪವನ್ ಕಾರ್ಯ ನಿರ್ವಹಿಸಿದರು. ಪ್ರಥಮ ಬಹುಮಾನ ಮೇಕೆ ಹಾಗೂ ದ್ವಿತೀಯ ಬಹುಮಾನ ಎರಡು ನಾಟಿ ಕೋಳಿ ಬಹುಮಾನವಾಗಿ ನೀಡಿದ್ದು ವಿಶೇಷವಾಗಿತ್ತು. ಗ್ರಾಮದ ಪ್ರಮುಖರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net