ಮಳೆಗೆ ಕೆಸರು ಗದ್ದೆಯಂತಾದ ರಸ್ತೆಗಳು

gurgunta rain
ನಿರಂತರ ಮಳೆಗೆ ಗೌಡೂರು ತಾಂಡಾದ ರಸ್ತೆ ಕೆಸರು ಗದ್ದೆಯಂತಾಗಿರುವುದು.
Published on

ಗುರುಗುಂಟಾ: ಸತತ ಮಳೆಯಿಂದ ಗೌಡೂರು ತಾಂಡಾದ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ರಾಡಿಯಿಂದ ಕೂಡಿದ ಬಹುತೇಕ ಒಳರಸ್ತೆಗಳು ಸಂಪೂರ್ಣ ಹದಗೆಟ್ಟು ಜನ ಸಂಚಾರಕ್ಕೆ ಸಮಸ್ಯೆಯಾಗಿದೆ. ಆದರೂ ಗ್ರಾಪಂ ದುರಸ್ತಿಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಗಳು ಹಾಳಾಗಿದ್ದರಿಂದ ಪಾದಚಾರಿಗಳು, ಮಕ್ಕಳು, ಮಹಿಳೆಯರು, ವೃದ್ಧರು, ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜಾರಿ ಬೀಳುವುವುದು ಗ್ಯಾರಂಟಿ. ತಾಂಡಾದ ಹನುಮಂತ ತುಮಾರಕಂಟಿ ಮನೆಯಿಂದ ಮಲ್ಲೇಶ ರಾಥೋಡ್ ಮನೆ ಹಾಗೂ ಗೋಪಾಲ್ ಮನೆಯಿಂದ ಸರ್ಕಾರಿ ಹಿಪ್ರಾ ಶಾಲೆಗೆ ಸಂಪರ್ಕಿಸುವ ರಸ್ತೆ ಸೇರಿದಂತೆ ಗ್ರಾಮದ ಬಹುತೇಕ ಒಳ ರಸ್ತೆಗಳು ಮಳೆಯಿಂದ ಹಾನಿಯಾಗಿವೆ.

ತಾಂಡಾದ ಬಹುತೇಕ ಓಣಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೆ ಮಣ್ಣಿನ ರಸ್ತೆಗಳು ಇರುವುದರಿಂದ ಸ್ವಲ್ಪ ಮಳೆಯಾದರೂ ಕೆಸರುಮಯವಾಗುತ್ತವೆ. ಕೊಳಚೆ ನೀರು ರಸ್ತೆ ಮೇಲೆ ಹರಿಯುವ ಸುಗಮ ಸಂಚಾರಕ್ಕೆ ತೊಂದರೆಯಾಗಿ ಜನರು ನರಕಯಾತನೆ ಅನುಭವಿಸುವಂತಾಗಿದೆ. ಜೆಜೆಎಂ ಯೊಜನೆ ಕಾಮಗಾರಿಗಾಗಿ ರಸ್ತೆ ಅಗೆದು ಮುಚ್ಚಿಲ್ಲ. ಅರ್ಧಕ್ಕೆ ಕೆಲಸ ಸ್ಥಗಿತಗೊಳಿಸುವುದೂ ರಸ್ತೆಗಳು ಹಾಳಾಗಲು ಕಾರಣವಾಗಿದ್ದ, ಗ್ರಾಪಂ ಅಧಿಕಾರಿಗಳು, ಸದಸ್ಯರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net