ರಸ್ತೆ ಜಲಾವೃತವಾಗಿ ವಾಹನ ಸವಾರರ ಪರದಾಟ ; ಕೆಎಂಎಫ್ ಎದುರು ಮತ್ತದೇ ಅವಾಂತರ

19 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲ ದಿನ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆ ಬಿರುಸಿನಿಂದ ಸುರಿಯಿತು. ಮಳೆಯಾದಾಗೊಮ್ಮೆ ಅವಾಂತರ ಸೃಷ್ಟಿಯಾಗುವ ಕೆಎಂಎಫ್ ಬಳಿ, ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡಬೇಕಾಯಿತು.
ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಕೆಎಂಎಫ್ ಎದುರಿನ ರಸ್ತೆ ಕೆರೆಯಂತಾಗಿತ್ತು. ಬಿಆರ್‌ಟಿಎಸ್ ಪಥಗಳು ಹಾಗೂ ಸಾರ್ವಜನಿಕ ವಾಹನ ಸಂಚರಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆ ಪಕ್ಕ ಹೋಗುತ್ತಿದ್ದ ಬೈಕ್ ಸವಾರನೊಬ್ಬ ಗುಂಡಿಯಲ್ಲಿ ಬಿದ್ದು ಪರದಾಡಿದ. ಗುಂಡಿಯಲ್ಲಿ ಅರ್ಧ ಮುಳುಗಿದ್ದ ಬೈಕ್ ಅನ್ನು ಸಾರ್ವಜನಿಕರು ಮೇಲಕ್ಕೆತ್ತಲು ಸಹಾಯ ಮಾಡಿದರು. ಅದೇ ಗುಂಡಿಯಲ್ಲಿ ಮತ್ತೆರಡು ವಾಹನಗಳು ಬಿದ್ದ ಘಟನೆ ನಡೆಯಿತು. ಕಾರ್‌ನಲ್ಲಿದ್ದವರು ಬಾಗಿಲು ತೆಗೆದು ಸಹಾಯಕ್ಕೆ ಹೋಗಲು ಮುಂದಾದಾಗ ಕಾರ್ ಒಳಗೆ ನೀರು ನುಗ್ಗಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು `ವಿಜಯವಾಣಿ'ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net