ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು

21 KRT SHARNAPA 02
ಕಾರಟಗಿ ತಾಲೂಕಿನ ಬೆನ್ನೂರಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಮೇಲೆ ನೀರು ಹರಿಯುತ್ತಿರುವುದು.
Published on

ಕಾರಟಗಿ: ತಾಲೂಕಿನ ಬೆನ್ನೂರು ಗ್ರಾಮದ 1ನೇ ವಾರ್ಡ್‌ನಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ, ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ.

ವಾರ್ಡ್‌ನಲ್ಲಿ ಚರಂಡಿ ಇದ್ದು, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಆಂಜನೇಯ ದೇವಸ್ಥಾನದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವರೆಗೂ ಇದೇ ಪರಿಸ್ಥಿತಿಯಿದೆ. ಸ್ಥಳೀಯರು ಚರಂಡಿ ನೀರಿನಲ್ಲೇ ಓಡಾಟ ನಡೆಸಬೇಕಾದ ಪರಿಸ್ಥಿತಿಯಿದೆ. ಸಮಸ್ಯೆ ಕುರಿತು ಗ್ರಾಪಂಗೆ ತಿಳಿಸಿದರೂ ಸಿಬ್ಬಂದಿ ಯಾವುದೇ ಕ್ರಮವಹಿಸಿಲ್ಲ.

ಕಳೆದ ಕೆಲ ತಿಂಗಳಿಂದಲೂ ಇದೇ ಪರಿಸ್ಥಿತಿಯಿದ್ದು, ಸುಧಾರಣೆ ಕಂಡಿಲ್ಲ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಶೀಘ್ರವೇ ಸಮಸ್ಯೆ ಪರಿಹರಿಸುವಂತೆ ಸ್ಥಳೀಯ ನಿವಾಸಿ ದೇವೇಂದ್ರ ಒತ್ತಾಯಿಸಿದ್ದಾರೆ. ಈ ಸಂಬಂಧ ಬೆನ್ನೂರು ಗ್ರಾಪಂ ಪಿಡಿಒ ಭಾಗ್ಯೇಶ್ವರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪಿಡಿಒ ಕರೆ ಸ್ವೀಕರಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net