ಮುಧೋಳಕ್ಕೆ ಹೆಸರು ತಂದ ರನ್ನ

The river that gave name to Mudhol
The river that gave name to Mudhol
Published on

ಮುಧೋಳ: ಉತ್ತರ ಕರ್ನಾಟಕದ ಜನತೆ ಮಾತು ಸ್ವಲ್ಪ ಒರಟಾದರೂ ಹೃದಯದಿಂದ ತುಂಬ ಶ್ರೀಮಂತರು. ಕಲೆ, ಕಲಾವಿದರನ್ನು ಕಂಡರೆ ತುಂಬ ಪ್ರೀತಿಯನ್ನು ಕೊಡುವ ಸ್ನೇಹಜೀವಿಗಳು ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದರು.

ನಗರದ ಅರಳಿಕಟ್ಟಿ ೌಂಡೇಷನ್ ಸಂಸ್ಥೆಯ ರಾಯಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರನ್ನನಿಂದ ಮುಧೋಳಕ್ಕೆ ಒಳ್ಳೆಯ ಹೆಸರು ಬಂದಿದೆ ಎಂದರು.

ಶಾಲೆಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಬಾರದು. ಮಕ್ಕಳಲ್ಲಿನ ಕಲೆ, ಪ್ರತಿಭೆ ಹೊರಬರಬೇಕು ಎಂದು ಈಜು, ಕರಾಟೆ, ವೇದಿಕ್ ಗಣಿತ, ಕುದುರೆ ಸವಾರಿ ಸಹಿತ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕ್ರಮವನ್ನು ಕೈಗೊಳ್ಳಬೇಕು ಎಂದರು.

ಅರಳಿಕಟ್ಟಿ ೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ ಮಾತನಾಡಿ, ನಾನು ಕೇವಲ ಶಾಲೆಯನ್ನು ನಿರ್ಮಿಸಿಲ್ಲ. ನಮ್ಮ ಭಾಗದಿಂದ ಹೊಸ ಹೊಸ ಪ್ರತಭೆಗಳನ್ನು ಗುರುತಿಸುವ ಸಂಸ್ಥೆ ಸ್ಥಾಪನೆ ಮಾಡಿದ್ದೇನೆ ಎಂದರು.

ಸಂಸ್ಥೆ ಅಧ್ಯಕ್ಷೆ ಸವಿತಾ ಅರಳಿಕಟ್ಟಿ, ಅನಂತರಾವ್ ಘೋರ್ಪಡೆ, ಸಂಸ್ಥೆ ಕಾರ್ಯದರ್ಶಿ ವಿನಾಯಕ ಅರಳಿಕಟ್ಟಿ, ಪಾಂಡು ಮುಳ್ಳೂರ, ಗಿರೀಶಗೌಡ ಪಾಟೀಲ, ಪ್ರಾಚಾರ್ಯ ಚಂದ್ರಶೇಖರ ನಾಗವಂದ, ಆಡಳಿತಾಧಿಕಾರಿ ಇಂದಿರಾ ಸವಣೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net