ಉನ್ನತ ಸ್ಥಾನ ತಲುಪಿದಾಗ ಗುರುಗಳ ಬೋಧನೆಗೆ ಪ್ರತಿಫಲ

22 NMG 01 (2)
Published on

ನಾಗಮಂಗಲ: ಗುರುಗಳಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನ ತಲುಪಿದಾಗ ಮಾತ್ರ ಗುರುಗಳ ಬೋಧನೆಯ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದಂತಾಗುತ್ತದೆ ಎಂದು ನಿವೃತ್ತ ಶಿಕ್ಷಕಿ ಮೀನಾಕ್ಷಿ ಹೇಳಿದರು.

ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ 1993-2000ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆದು ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷದ ವಿಷಯ. ನನ್ನ ವೃತ್ತಿ ಜೀವನದಲ್ಲಿ ಶಾಲೆಯನ್ನು ಮರೆಯಲು ಸಾಧ್ಯವಿಲ್ಲ. ಶಾಲೆಗೆ ಮರಳಿ ಬಂದು ನೆನಪುಗಳನ್ನು ಸ್ಮರಣೀಯವಾಗಿಸಿದ ವಿದ್ಯಾರ್ಥಿಗಳಿಗೆ ನಾನು ಋಣಿಯಾಗಿದ್ದೇನೆ ಎಂದರು.

ನಿವೃತ್ತ ಶಿಕ್ಷಕರಾದ ಜಯಮ್ಮ, ಶಿಕ್ಷಕಿ ಗಿರಿಜಮ್ಮ, ಶಿಕ್ಷಕಿ ರತ್ನಮ್ಮ ಮಾತನಾಡಿದರು. ಶಿಕ್ಷಕಿ ಶಾಂತಲಕ್ಷ್ಮೀ ಅವರ ನಿಧನಕ್ಕೆ ಹಿರಿಯ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. 1993-2000ನೇ ಸಾಲಿನಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸಿದ್ದ ರತ್ನಮ್ಮ, ಗಿರಿಜಮ್ಮ, ಮೀನಾಕ್ಷಿ, ಜಯಮ್ಮ, ಅವರನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಚನ್ನಕೇಶವ, ವಿನಾಯಕ್, ನಾಗೇಂದ್ರ, ವೀಣಾ, ಶ್ರೀಕಾಂತ್, ಇಸ್ಮಾಯಿಲ್, ಸುನಿಲ್, ನಾಗಭೂಷಣ್, ಶ್ಯಾಮ್, ಧನಲಕ್ಷ್ಮಿ, ರಾಘವೇಂದ್ರ, ಅರುಣ್, ರೇಖಾ, ತುಳಸಿ, ವಿದ್ಯಾ, ರಘು, ಲತಾ, ಭಾನುಮತಿ, ನಾಗೇಶ್ ಬಾಬು, ಅಶ್ವಿನಿ, ಮುಷಾಯಿರ್, ವಿದ್ಯಾಶ್ರೀ, ವೀಣಾ, ಭಾನುಮತಿ, ಫಾರ್ಥ, ನಾಗೇಶಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net