ಉತ್ಥಾನ ರಾಜ್ಯಮಟ್ಟದ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ

uttana
Published on

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ ಲಿತಾಂಶ ಪ್ರಕಟವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.

ಕಥಾ ಸ್ಪರ್ಧೆಯಲ್ಲಿ ಒಟ್ಟು 412 ಕಥೆಗಳು ಭಾಗವಹಿಸಿದ್ದವು. ಲೇಖಕ ಪ್ರೊ. ಎನ್.ಎಸ್. ಶ್ರೀಧರಮೂರ್ತಿ ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದ್ದಾರೆ.

ಮೊದಲನೆ ಬಹುಮಾನಕ್ಕೆ 15 ಸಾವಿರ ನಗದು ಬಹುಮಾನ ನೀಡಲಾಗಿದ್ದು, ಗಣೇಶಭಟ್ಟ ಕೊಪ್ಪಲತೋಟರ ‘ತೀರ್ಪು’ ಎಂಬ ಕಥೆ ಇದನ್ನು ಪಡೆದುಕೊಂಡಿದೆ. ಎರಡನೆಯ ಬಹುಮಾನವನ್ನು ಶಿವಮೊಗ್ಗದ ಮೃತ್ಯುಂಜಯ ಎಚ್. ‘ಕಥೆಯ ಪಾತ್ರದ ಎದುರು’ ಎಂಬ ಕಥೆ ಪಡೆದುಕೊಂಡಿದ್ದು, 12 ಸಾವಿರ ನಗದು ನೀಡಲಾಗಿದೆ. ಮೂರನೆಯ ಬಹುಮಾನ ಸದಾಶಿವ ಸೊರಟೂರು ಅವರ ‘ಮುರಿದ ಮರದ ಚಿಗುರು’ ಕಥೆ ಪಡೆದಿದ್ದು 10 ಸಾವಿರ ನಗದು ಬಂದಿದೆ.

ಇನ್ನುಳಿದಂತೆ 5 ಕಥೆಗಳು ಮೆಚ್ಚುಗೆ ಬಹುಮಾನವನ್ನು ಪಡೆದಿದ್ದು, ತಲಾ 2 ಸಾವಿರ ನಗದು ಒಳಗೊಂಡಿದೆ. ಕಿರಣ್ ಪ್ರಸಾದ್ ರಾಜನಹಳ್ಳಿಯವರ ಸ್ಥಿತ್ಯಂತರ, ವನರಾಗ ಶರ್ಮಾರ ನೆತ್ತರ ಬೀದಿಗುಂಟ, ಭಾಗ್ಯರೇಖಾ ದೇಶಪಾಂಡೆಯವರ ನಿಷ್ಕ್ರಮಣ, ಜಯರಾಮಚಾರಿಯವರ ಅನಿಕೇತನ, ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಸಾಂಗತ್ಯ ಕಥೆಗಳು ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net