

ಬೆಳ್ವೆ: ದೇಶಕ್ಕೆ ಸ್ವಾತಂತ್ಯ ದೊರೆತ ಅಂದಿನ ದಿನಗಳು ಅವಿಸ್ಮರಣೀಯ. ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ನಡೆಯುವ ಆಚರಣೆಗಳು ವಿಶಿಷ್ಟತೆ ಹಾಗೂ ಅರ್ಥಪೂರ್ಣವಾಗಿವೆ. ದೇಶದ ಪ್ರಗತಿಯಲ್ಲಿ ಯುವ ಜನತೆಯ ಹೊಣೆಗಾರಿಕೆ ಮಹತ್ವದ್ದು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹೇಳಿದರು.
ಬೆಳ್ವೆಯಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ್ಗೋಳಿ, ವಾಜಿ ಅಧ್ಯಕ್ಷ ಎಚ್.ವಸಂತಕುವಾರ್ ಶೆಟಿ ಬೆಳ್ವೆ, ಕಾರ್ಯದರ್ಶಿ.ಕೆ.ಸಂಜೀವ ಆರ್ಡಿ, ಜತೆ ಕಾರ್ಯದರ್ಶಿ ಕೀರ್ತಿಕುವಾರ್ ಶೆಟ್ಟಿ, ಸದಸ್ಯ ಬಿ.ಹರೀಶ್ ಕಿಣಿ ಬೆಳ್ವೆ, ಸದಸ್ಯೆ ಚಂದ್ರಿಕಾ ಬೆಳ್ವೆ, ಭಾರ್ಗವಿ ಪಿ ಭಟ್ ಗೋಳಿಯಂಗಡಿ, ಲಿಯೋ ಕ್ಲಬ್ ಅಧ್ಯಕ್ಷ ಸೃಜನ್ ಶೆಟ್ಟಿ ಉಪಸ್ಥಿರಿದ್ದರು.
ಚಂದ್ರಿಕಾ ಬೆಳ್ವೆ ಪ್ರಾರ್ಥಿಸಿದರು. ಕೆ.ಸಂಜೀವ ಆರ್ಡಿ ಸ್ವಾಗತಿಸಿದರು. ಭಾರ್ಗವಿ ಪಿ.ಭಟ್ ವಂದಿಸಿದರು. ಕೀರ್ತಿಕುವಾರ್ ಶೆಟ್ಟಿ ನಿರೂಪಿಸಿದರು.