

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಸವಾಜದ ಅಂಕುಡೊಂಕು ತಿದ್ದಿ, ಸರಿಪಡಿಸುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಎಚ್ಚರಿಸುವಲ್ಲಿ ಸುದ್ದಿ ವಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯಪಟ್ಟರು.
ನಗರದಲ್ಲಿನ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕಾ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸ್ತುತ ವಿದ್ಯವಾನಗಳ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ವಾಧ್ಯಮಗಳು ಸವಾಜದ ಹಿತದೃಷ್ಟಿಯಿಂದ ಹತ್ತು ಹಲವು ಸವಾಲುಗಳ ಮಧ್ಯೆ ಕೆಲಸ ನಿರ್ವಹಿಸುತ್ತಿವೆ. ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ, ಹಾಗೆಯೇ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಕೆಲಸವನ್ನು ನಿರ್ವಹಿಸುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಾಮಾಣಿಕತೆ ಕಾಣಬೇಕಾಗಿದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ವಾಧ್ಯಮ ಕೌಶಲ ಅಳವಡಿಸಿಕೊಂಡು ವಸ್ತುನಿಷ್ಠ ಸುದ್ದಿಗಳನ್ನು ಹೇಗೆ ಬರೆಯಬೇಕೆಂಬುದನ್ನು ಕಲಿಯಬೇಕು ಎಂದರು.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂಬ ಮನ್ನಣೆಗೆ ಪಾತ್ರವಾಗಿರುವ ವಾಧ್ಯಮಗಳ ಹೊಣೆಗಾರಿಕೆಯು ಮಹತ್ತರವಾದದ್ದು. ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಕಪೋಲಕಲ್ಪಿತ ಸುದ್ದಿಗಳಿಗೆ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.
ಲೇಖನಿಯು ಸವಾಜವನ್ನು ಸರಿದಾರಿಗೆ ಕೊಂಡೊಯ್ಯುವ ಶಕ್ತಿ ಹೊಂದಿದೆ. ಸುದ್ದಿ ವಾಧ್ಯಮಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ತಂತ್ರಜ್ಞಾನ ಅಳವಡಿಸಿಕೊಂಡು ಹೊಸತನ, ಉತ್ಸಾಹದಿಂದ ಮತ್ತಷ್ಟು ಕ್ರಿಯಾಶೀಲತೆ ಹೊಂದಿರಬೇಕು. ಅದರಲ್ಲೂ ಪತ್ರಕರ್ತರು ಸದಾ ಅಧ್ಯಯನಶೀಲರಾಗಿರಬೇಕು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಡಾ.ಶಿವಜ್ಯೋತಿ ವಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸಾವಾಜಿಕ ಕಳಕಳಿ, ಜೀವನ ಶಿಸ್ತು ಮತ್ತು ಪುಸ್ತಕಗಳ ಅಧ್ಯಯನ ಕಡಿಮೆಯಾಗುತ್ತಿದ್ದು, ಮೊಬೈಲ್ ಗೀಳಿನಿಂದ ಹೊರ ಬರಬೇಕಾಗಿದೆ ಎಂದರು.
ಡಾ.ಜಚನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಶಿವಶಂಕರ್, ಅಧೀಕ್ಷಕ ಕೆ.ಕೆ.ರಾಜು, ಸಿದ್ದರಾಮಯ್ಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ, ಶೈಲಜಾ, ಸುಪ್ರೀತಾ ಮತ್ತು ವಿಜಯ ಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್.ಮಂಜುನಾಥ್ ಮತ್ತಿತರರು ಇದ್ದರು.
ನಿರಂತರ ಅಧ್ಯಯನಶೀಲ ಗುಣ ಅಗತ್ಯ
ಸ್ವಾತಂತ್ರ್ಯ ಪೂರ್ವದ ಪತ್ರಿಕೋದ್ಯಮದ ದಿಕ್ಕು ದೆಸೆ ಮತ್ತು ಆಶಯಗಳೇ ಬೇರೆ. ತಂತ್ರಜ್ಞಾನ ಉತ್ತುಂಗದ ಇಂದಿನ ವಾಧ್ಯಮಗಳ ಕಾರ್ಯಶೈಲಿ ಮತ್ತು ದಾರಿಯೇ ಬೇರೆಯಾಗಿದೆ. ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ವಾಧ್ಯಮಗಳಿರುವುದು. ಸವಾಜದ ಕಳಕಳಿ ಹೊಂದಿರುವ ಪ್ರತಿಯೊಬ್ಬರೂ ಪತ್ರಕರ್ತರೇ ಆಗಿರುತ್ತಾರೆ. ಪತ್ರಕರ್ತರಾಗಲು ಹೆಚ್ಚು ನೀತಿ ನಿಯಮಗಳ ಚೌಕಟ್ಟು ಇರುವುದಿಲ್ಲ. ಆದರೂ ಭಾಷೆಯ ಮೇಲೆ ಹಿಡಿತ, ಸಾವಾನ್ಯ ಜ್ಞಾನ ಮತ್ತು ನಿರಂತರ ಅಧ್ಯಯನಶೀಲತೆಯ ಗುಣ ಇರಬೇಕು ಎಂದು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಎಂ.ಜಯರಾಮ್ ಹೇಳಿದರು.
ಸಂವಿಧಾನದ ಆಶಯ ಈಡೇರಿಸೋಣ
ವಾಧ್ಯಮಗಳು ಮತ್ತು ಪ್ರಸ್ತುತ ವಿದ್ಯವಾನಗಳು ವಿಷಯ ಕುರಿತು ಪತ್ರಕರ್ತ ಎನ್.ಚಂದ್ರಶೇಖರ್ ಉಪನ್ಯಾಸ ನೀಡಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯ ಈಡೇರಿಸುವುದು ವಾಧ್ಯಮಗಳ ಕರ್ತವ್ಯ. ಮೌಢ್ಯ, ಕಂದಾಚಾರಗಳೂ ಸೇರಿ ಸಾವಾಜಿಕ ವಿವಿಧ ಅನಿಷ್ಟಗಳನ್ನು ಹೋಗಲಾಡಿಸಿ, ಆರೋಗ್ಯಕರ, ವೈಚಾರಿಕ ಮನೋಭಾವದ ನಾಡು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ವಾಧ್ಯಮಗಳು ಒಂದು ರೀತಿಯ ಬಿಕ್ಕಟ್ಟು ಎದುರಿಸುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಷೀಣವಾಗುತ್ತಿದೆ. ಬಹುತೇಕ ವಾಧ್ಯಮಗಳು ಆಳುವ ವರ್ಗಗಳ ಕೈಗೊಂಬೆಗಳಾಗಿವೆ. ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುವ ಮಟ್ಟಿಗೆ ಬಂದು ನಿಂತು ಆಳುವ ವರ್ಗಗಳ ಪಾದದ ಬುಡದಲ್ಲಿ ಶರಣಾಗತಿಯಾಗಿರುವಂತೆ ಭಾಸವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ವಾಧ್ಯಮಗಳು ಸದಾ ದನಿಯಿಲ್ಲದವರ ದನಿಯಾಗಬೇಕು. ಕೇವಲ ಹಣದ ವ್ಯಾಮೋಹ ಇರುವವರು ಜೀವನೋಪಾಯಕ್ಕಾಗಿ ವಾಧ್ಯಮ ಕ್ಷೇತ್ರಕ್ಕೆ ಬರುವುದು ಬೇಡ ಎಂದು ಸಲಹೆ ನೀಡಿದರು.