

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ದೇಶಕ್ಕೆ ಸ್ವಾತಂತ್ರೃ ಕೊಡಿಸಲು ಸತ್ಯ, ಅಹಿಂಸೆ ಮಾರ್ಗ ಮಾರ್ಗವಲ್ಲದೆ ಸಶಸ್ತ್ರ ಹೋರಾಟದಿಂದ ಬ್ರಿಟಿಷರನ್ನು ಹೊರಹಾಕಲು ಭಾರತೀಯ ಸೇನೆ ರಚಿಸಿದ ದಿಟ್ಟ, ಧೀಮಂತ ವ್ಯಕ್ತಿ ಸುಭಾಷಚಂದ್ರ ಭೋಸ್. ನೇತಾಜಿ ಎಂದೇ ಪ್ರಸಿದ್ಧರಾದ ಇವರು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದವರು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪರಾಕ್ರಮ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಸಾಹಿತ್ಯ ಹಾಗೂ ಉಪನ್ಯಾಸಗಳಿಂದ ಪ್ರೇರಣೆಗೊಂಡವರು. ಗಾಂಧೀಜಿ ಭೇಟಿ ಮಾಡಿ, ಆಗಿನ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಯುವಕರ ಸಂಘ ಕಟ್ಟಿದರು. ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಷ್ಟ್ರದ ಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದು ಎಂಬುದು ಬೋಸ್‌ರ ದಿಟ್ಟ ನಿಲುವಿನ ಪ್ರತಿಧ್ವನಿಯಾಗಿತ್ತು. ಅವರ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದು ಘೋಷಿಸಿದ್ದು, ಉತ್ತಮ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಯುವಕರ ಕೈಯಲ್ಲಿದೆ. ನೇತಾಜಿ ಅವರ ಶಿಸ್ತು, ಪರಾಕ್ರಮ, ಸಾಧನೆ, ದೇಶಭಕ್ತಿ ಯುವ ಜನೆತೆಗೆ ಸ್ಫೂರ್ತಿಯಾಗಲಿ ಎಂದರು.
ಮಹಾವೀರ ಉಪಾಧ್ಯೆ, ಡಾ. ಆರ್.ವಿ ಚಿಟಗುಪ್ಪಿ, ಜಿನೇಂದ್ರ ಕುಂದಗೋಳ, ವಿವೇಕ ಲಕ್ಷ್ಮೇಶ್ವರ, ವಿಭಾ ಮುಗಳಿ, ಎನ್.ಎಲ್ ಗುಡ್ಡಿನ, ಎನ್‌ಎಸ್‌ಎಸ್ ಅಧಿಕಾರಿ ರೋನಿಲ್ ಮನೋಹರ, ಶ್ರೀಕಾಂತ ರಾಗಿಕಲ್ಲಾಪುರ, ವಿದ್ಯಾರ್ಥಿಗಳು, ಇತರರು ಇದ್ದರು.