ಮೊಳಗಿದ ಭಾರತ ಮಾತೆಯ ಜಯಘೋಷ

The resounding cry of Mother India
ಗುಳೇದಗುಡ್ಡ ಪಟ್ಟಣದಲ್ಲಿ ನಗರ ಸುಧಾರಣಾ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಮೆರವಣಿಗೆಯಲ್ಲಿ ಕಮತಗಿ-ಕೋಟೆಕಲ್ ಹುಚ್ಚೇಶ್ವರ ಮಠದ ಹೊಳೆ ಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು, ಮಾಜಿ ಶಾಸಕ ರಾಜಶೇಖರ ಶೀಲವಂತ ಮತ್ತಿತರರು ಇದ್ದರು.
Published on

ಗುಳೇದಗುಡ್ಡ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಇತ್ತೀಚೆಗೆ ನಗರ ಸುಧಾರಣಾ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಪಟ್ಟಣದ ಭಂಡಾರಿ ಕಾಲೇಜು ಸರ್ಕಲ್‌ದಿಂದ ಪ್ರಾರಂಭವಾಗಿ ಪವಾರ ಕ್ರಾಸ್, ಝಳಕಿ ಗಂಟಿ, ಪುರಸಭೆ, ಸರಾಫ್ ಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ್, ಅರಳಿಕಟ್ಟಿ ಮುಖಾಂತರ ಹಾಯ್ದು ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆ ಹತ್ತಿರ ಬಂದು ವೇದಿಕೆ ಕಾರ್ಯಕ್ರಮವಾಗಿ ರೂಪುಗೊಂಡಿತು.

ಮೆರವಣಿಗೆಯಲ್ಲಿ ಗುರುಸಿದ್ಧೇಶ್ವರ ಮಠದ ಬಸವರಾಜ ಶ್ರೀಗಳು, ಕಮತಗಿ-ಕೋಟೆಕಲ್ ಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು, ಮುರಘಾಮಠದ ಕಾಶೀನಾಥ ಶ್ರೀಗಳು, ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ನಗರ ಸುಧಾರಣಾ ಸಮಿತಿ ಅಧ್ಯಕ್ಷ ರಂಗಪ್ಪ ಶೇಬಿನಕಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತ, ಅಶೋಕ ಹೆಗಡಿ, ಕಮಲಕಿಶೋರ ಮಾಲಪಾಣಿ, ಈಶ್ವರಿ ಬ್ರಹ್ಮಕುಮಾರಿ ಅಶ್ರಮದ ಶಾಂತಕ್ಕ, ಮಹೇಶ ಬಿಜಾಪೂರ, ಡಾ. ಚಂದ್ರಶೇಖರ ಜವಳಿ, ಡಾ ಬಸವಾರಜ ಬಂಟನೂರ, ಡಾ. ನಾರಾಯಣ ನೀಲವಾಣಿ ಭಾಗವಹಿಸಿದ್ದರು.

ಪ್ರತಿಯೊಬ್ಬರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ದೇಶ ಪ್ರೇಮದ ಘೋಷಣೆ ಕೂಗುತ್ತ, ಸೈನಿಕರಿಗೆ ಜೈಕಾರ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net