ಕಾಲ್ತುಳಿತದ ವರದಿ ಸರಿ ಇಲ್ಲ

xr:d:DAFAL4fNdQg:3168,j:31205591780,t:22072105
xr:d:DAFAL4fNdQg:3168,j:31205591780,t:22072105
Published on

ಹುಬ್ಬಳ್ಳಿ : ಆರ್​ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತದ ಘಟನೆಗೆ ಪೊಲೀಸರ ವೈಫಲ್ಯ ಕಾರಣವೆಂಬ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ವರದಿ ಸರಿ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯೋತ್ಸವ ಹಾಗೂ ಸಮಾರಂಭಕ್ಕೆ ಜನರನ್ನು ಆಹ್ವಾನಿಸಿದ್ದು ಯಾರು ? ಎಂದು ಪ್ರಶ್ನಿಸಿದರು.

ವಿಜಯೋತ್ಸವ ಬೇಡವೆಂದು ಪೊಲೀಸರು ಮುನ್ಸೂಚನೆ ನೀಡಿದರೂ, ಕಾಂಗ್ರೆಸ್ ನಾಯಕರು ತಮ್ಮ ಪ್ರತಿಷ್ಠೆಗಾಗಿ ವಿಜಯೋತ್ಸವ ಹಾಗೂ ಸಮಾರಂಭ ಆಯೋಜಿಸುವ ಮೂಲಕ ಅಮಾಯಕರ ಸಾವಿಗೆ ಕಾರಣವಾದರು. ಕಾಲ್ತುಳಿತದ ಘಟನೆಗೆ ಮುಖ್ಯಮಂತ್ರಿ ಅವರಾಗಲಿ ಅಥವಾ ಇತರ ಸಚಿವರಾಗಲಿ ಅಧಿಕಾರಿಗಳ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ತನಿಖಾ ನಿಯೋಗ ರಚಿಸುವ ಮುನ್ನಾ ಮುಖ್ಯಮಂತ್ರಿ ಅವರು ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net