ಅಂಥ ಪ್ರಾಧ್ಯಾಪಕರ 'ಗುರುವೇ ನಿಮಗೆ ಶರಣು, ಹಚ್ಚೇವು ಕನ್ನಡದ ದೀಪ' ಕೃತಿ ಬಿಡುಗಡೆ

Published on

ಮೈಸೂರು: ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಪಿ.ವಿ.ನಾಗರಾಜ ಅವರ ‘ಗುರುವೇ ನಿಮಗೆ ಶರಣು’ ಹಾಗೂ ‘ಹಚ್ಚೇವು ಕನ್ನಡದ ದೀಪ’ ಕೃತಿಗಳು ಆ.30ರಂದು ಬಿಡುಗಡೆಗೊಳ್ಳಲಿವೆ.
ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಲೇಖಕ ಡಾ.ಪಿ.ವಿ.ನಾಗರಾಜ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಂಶುಪಾಲ ಪ್ರೊ.ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಪ್ರಾಧ್ಯಾಪಕರಾದ ಪ್ರೊ.ಬಿ.ಪಿ.ಆಶಾಕುಮಾರಿ, ಡಾ.ಕೆ.ಇ.ಗೋವಿಂದೇಗೌಡ, ಪ್ರಕಾಶಕರಾದ ಓಂಕಾರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಾಲ್ಯದಿಂದಲೂ ದೃಷ್ಟಿ ದಿವ್ಯಾಂಗರಾಗಿದ್ದರೂ ಸಾಹಿತ್ಯದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದೇನೆ. ನಾನಾ ಸ್ಪರ್ಧಾಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದು, ಈಗ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇತರರಿಗೆ ಪ್ರೇರಣೆ ಆಗಲೆಂದು ಈ ಕೃತಿಗಳನ್ನು ರಚಿಸಿರುವುದಾಗಿ ತಿಳಿಸಿದರು.
ಪ್ರಕಾಶಕ ಓಂಕಾರಪ್ಪ, ಆಯೋಜಕರಾದ ಡಾ.ಎಂ.ಎನ್.ದಿನೇಶ್, ಶಿವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net