

ಬೆಂಗಳೂರು: ರಾಜ್ಯದ ರೈತರ ಬಹುಬೇಡಿಕೆಯ ಪ್ಯಾರಂಪಸ್ ಪ್ಲಸ್ ರಸಗೊಬ್ಬರ ಬಿಡುಗಡೆಯಾಗಿದ್ದು, ರೈತರಿಗೆ ಸಂತಸ ಮೂಡಿಸಿದೆ. ಬೆಂಗಳೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಾರಾಟಗಾರರು ಹಾಗೂ ರೈತರ ಸಮ್ಮುಖದಲ್ಲಿ ಕೋರಮಂಡಲ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಸುಬ್ರಹ್ಮಣ್ಯ ಅವರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಕೋರಮಂಡಲ ಸಂಸ್ಥೆಯ ಸಾವಯವ ಗೊಬ್ಬರಗಳಾದ ಅರೆಕಾಶಕ್ತಿ ಮತ್ತು ಕಾಫಿ ಬಿಸ್ ಹಾಗೂ ನ್ಯಾನೋ ಯೂರಿಯಾ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಉತ್ಪನ್ನಗಳ ಕುರಿತಾದ ಮಾಹಿತಿಯನ್ನು ಹಿರಿಯ ಅಧಿಕಾರಿ ವಿನಯ ಪರಿದ ನೀಡಿದರು. ಕಾರ್ಯಕ್ರಮದಲ್ಲಿ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಾದವ್, ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಸ್ಥರಾದ ರೋಹಿತ್ ಶರ್ಮ ಹಾಗೂ ಕಂಪನಿಯ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.