ಬೈಕ್ ಹಿಂಬದಿ ಸವಾರ ಸಾವು

Accident
Published on

ಅಂಕೋಲಾ: ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಅವರ್ಸಾದಲ್ಲಿ ಬುಧವಾರ ನಡೆದಿದೆ.

ಹೊನ್ನಾವರ ತಾಲೂಕಿನ ಬೆಳ್ಳಿಮಕ್ಕಿ ಕೋಡಾಣಿ ನಿವಾಸಿ ಪ್ರತಾಪ ಆಂಥೋನಿ ಲೋಬೋ (30) ಮೃತಪಟ್ಟ ಸವಾರ. ಕಾರವಾರದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಬೈಕ್ ಚಲಾಯಿಸುತ್ತಿದ್ದ ಜೇಮ್ಸ್ ಇಸ್ತೆವ್ ಲೋಬೋ (35) ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಹೊನ್ನಾವರ ಬೆಳ್ಳಿಮಕ್ಕಿ, ಕೋಡಾಣಿ ನಿವಾಸಿ ದೀಪಕ ಸಲ್ಮಾವ್ ಲೋಬೋ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net