ಸಹೃದಯಿ ಜನರನ್ನು ಗಳಿಸುವುದೇ ನಿಜವಾದ ಆಸ್ತಿ

8 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯ ತನ್ನ ಕೌಟುಂಬಿಕ ಜೀವನದೊಂದಿಗೆ ಕಲೆ, ಸಾಹಿತ್ಯ, ಸಂಗೀತ ಅಳವಡಿಸಿಕೊಂಡಾಗ ಮಾತ್ರ ಪರಿರ್ಪೂಣವಾಗಲು ಸಾಧ್ಯ. ಇಂತಹ ಕಾರ್ಯವನ್ನು ಉಮೇಶ ಮುನವಳ್ಳಿ ಕುಟುಂಬ ಕೈಗೊಂಡು ಮಾದರಿಯಾಗಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಹೇಳಿದರು.
ನಗರದ ಅಮೋಘ ಇಂಟರ್​ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಫಾರ್​ ಆರ್ಟ್ಸ್​ ಸಂಸ್ಥೆ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಪಂ.ಬಸವರಾಜ ವಕ್ಕುಂದ ಜನ್ಮಶತಮಾನೋತ್ಸವ, ಗಾಯಕ ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರ 10ನೇ ಸ್ಮೃತಿ ಸಮಾರೋಹ ಹಾಗೂ ಗಾಯಕ ಉಮೇಶ ಮುನವಳ್ಳಿ ಜನ್ಮದಿನ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಹಿತ್ಯ-ಸಂಗೀತ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಯಕ ಪಂ. ಎಂ. ವೆಂಕಟೇಶಕುಮಾರ ಮಾತನಾಡಿ, ಏನನ್ನೂ ಬಯಸದೇ ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲಾಗದು. ಉಮೇಶ ಮುನವಳ್ಳಿ ಅವರು ಗುರುಸ್ಮರಣೆಯಲ್ಲಿ ತೊಡಗಿ ಮತ್ತಿಗಟ್ಟಿ ಅವರ ಜೀವನ ಸಾಧನೆ ಕುರಿತು ನಿನಾದ ಕೃತಿ ಪ್ರಕಟಿಸಿ, ನಾಡಿಗೆ ಸರ್ಮಪಿಸಿದ್ದಾರೆ. ಗುರು, ಸಮಾಜ, ಸಹೃದಯಿ ಜನರನ್ನು ಗಳಿಸುವುದೇ ನಿಜವಾದ ಆಸ್ತಿಯಾಗಿದೆ ಎಂದರು.
ಡಾ.ನಿಂಗಪ್ಪ ಮುದೇನೂರ, ಲೇಖಕಿ ನಾಗರೇಖಾ ಗಾಂವಕರ, ಪ್ರಕಾಶ ಬಾಳಿಕಾಯಿ ಮಾತನಾಡಿದರು. ಕವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಅಧ್ಯತೆ ವಹಿಸಿದ್ದರು.
ಉಮೇಶ ಮುನವಳ್ಳಿ ರಚನೆಯ ಪಾತ್ರಧಾರಿ ಹಾಗೂ ನಿನಾದ ಎರಡೂ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ಕವನ ವಾಚಿಸಿದರು. ವೀರಣ್ಣ ಪತ್ತಾರ, ಚನ್ನಬಸನಗೌಡ ಹನುಮಂತಗೌಡರ, ಶ್ರೀಧರ ಗಸ್ತಿ, ಸೀತಾ ಚಪ್ಪರ, ಸುರೇಖಾ ಸುರೇಶ, ಪ್ರತಿಭಾ ಪಾಟೀಲ, ರವಿಶಂಕರ ಗಡಿಯಪ್ಪನವರ, ಜಗದೀಶ ಮುನವಳ್ಳಿ, ಚಂದ್ರಶೇಖರ ವಕ್ಕುಂದ, ಸುಹಾಶಿನಿ ಕುಕಡೊಳ್ಳಿ, ಪ್ರವಿಣ ನಾಯ್ಕ್​, ಇತರರು ಇದ್ದರು.
ಉಮೇಶ ಮುನವಳ್ಳಿ ಸ್ವಾಗತಿಸಿದರು. ದೀಪಶ್ರೀ ನಾಯ್ಕ್​ ನಿರೂಪಿಸಿದರು. ಮಂಜುಳಾ ಮುನವಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net