ಸೋತು ಗೆದ್ದವನೇ ನಿಜವಾದ ಸಾಧಕ

h24-jabin college
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೋಲುತ್ತ-ಸೋಲುತ್ತ ಗೆಲ್ಲಬೇಕು. ಅದೇ ನಿಜವಾದ ಸಾಧನೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ್ ಹೇಳಿದರು.

ನಗರದ ಪಿ.ಸಿ. ಜಾಬಿನ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲಿಕೆಗೆ ಅಂತ್ಯವಿಲ್ಲ. ಯಾವುದೇ ಚಟುವಟಿಕೆಗಳಿರಲಿ, ವಿದ್ಯಾರ್ಥಿಗಳು ಸದಾ ಕಲಿಕೆಯಲ್ಲಿ ತೊಡಗಿರಬೇಕು. ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂಚೂಣಿಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸದೃಢವಾದ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದರು.

ಡಾ. ಎಲ್.ಡಿ. ಹೊರಕೇರಿ ಮಾತನಾಡಿದರು.

ವೃತ್ತಿಪರ ಕೋರ್ಸ್​ಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಅಕ್ಷತ ದೊಡವಾಡ, ಸುಮತಿ ಕಾಮರಡ್ಡಿ, ಸುಮಿತ ಸಾಳುಂಕಿ, ವೈಷ್ಣವಿ ಕಲೂತಿ, ವಿಕಾಸ ಬಡಿಗೇರ, ಸಂಜನಾ ಕುಲಕರ್ಣಿ, ಅಭಿಷೇಕ ಪಾಟೀಲ, ಈಶ್ವರ ಸಣಕಲ್, ಕುನಾಲ ಕರ್ಜಗಿ, ಮಧುಸೂಧನ ಆರ್.ಬಿ., ಆದಿತ್ಯ ಬೆಟಗೇರಿ, ಚನ್ನವೀರಸ್ವಾಮಿ ಹಿರೇಮಠ, ಶುಭಂ ಮೆಹರವಾಡೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಭಾಕರನ್ ಟಿ., ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಪ್ರೀತಂ ಬಾಂಡೆ ಮತ್ತು ಶ್ರದ್ಧಾ ಬನವಲಿಕರ್ ಉಪಸ್ಥಿತರಿದ್ದರು. ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ. ದೀಪಕ ಮುನವಳ್ಳಿ ವಂದಿಸಿದರು. ಉಪನ್ಯಾಸಕಿಯರಾದ ಅಮೃತಾ ಅಣ್ಣಿಗೇರಿ, ಗಿರಿಜಾ ಢಣಾಕ ನಿರೂಪಿಸಿದರು. ಪ್ರಾಚಾರ್ಯ ವಿ.ಆರ್. ವಾಘಮೋಡಿ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ವೇಣುಗೋಪಾಲ ಎಚ್. ಆರ್. ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net