ವರ್ಷಧಾರೆಗೆ ತುಂಬಿ ಹರಿದ ಹಳ್ಳಕೊಳ್ಳಗಳು

mudgal rain
ಮುದಗಲ್‌ನ ಹಳೇಪೇಟೆ ಕೆರೆಯು ಭರ್ತಿಯಾದ ಹಿನ್ನೆಲೆಯಲ್ಲಿ ಯುವಕರ ದಂಡು ಮೀನು ಹಿಡಿಯಲು ಮುಗಿಬಿದ್ದಿದ್ದರು.
Published on

ಮುದಗಲ್: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮುದಗಲ್ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಳ್ಳಕೊಳ್ಳ, ಕೆರೆಗಳು ಭರ್ತಿಯಾಗಿವೆ.

ಒಂದೂವರೆ ಗಂಟೆ ಸುರಿದ ವರ್ಷಧಾರೆಗೆ ಪಟ್ಟಣದ ಹಳೇಪೆಟೆಯ ಕೆರೆ ಹಾಗೂ ಜಾಡರಪೇಟೆಯ ಕೆರೆ ತುಂಬಿವೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಮನೆಗೆ ತೆರಳದೆ ಅಂಗಡಿ ಮುಂಗಟ್ಟುಗಳಲ್ಲಿಯೇ ಕಾಲ ಕಳೆಯುವಂತಾಯಿತು.

ಮುದಗಲ್ ಕೋಟೆ ಮುಂಭಾಗದ ಕಂದಕಕ್ಕೆ ಮಳೆ ನೀರು ಸಂಗ್ರಹಗೊಂಡು ಭರ್ತಿಯಾಗಿದ್ದು, ಮೀನು ಹಿಡಿಯಲು ಯುವಕರ ದಂಡು ಕೆರೆ ಹಾಗೂ ಕಂದಕದ ಹತ್ತಿರ ಜಮಾಯಿಸಿದ್ದು ಕಂಡುಬಂತು. ಜಕ್ಕೇರಮಡು, ಬನ್ನಿಗೋಳ, ಕನ್ನಾಳ, ನಾಗಲಾಪುರ ಗ್ರಾಮದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದವು.

ಇದರಿಂದ ರಸ್ತೆ ಸಂಚಾರಕ್ಕೆ ಸ್ವಲ್ಪ ಅಡೆತಡೆ ಉಂಟಾಯಿತು. ರಾತ್ರಿ ಸುರಿ ಧಾರಾಕಾರ ಮಳೆಯಿಂದ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net