ವಾರಸುದಾರರಿಗೆ ಚಿನ್ನಾಭರಣವಿದ್ದ ಬ್ಯಾಗ್ ಹಸ್ತಾಂತರಿಸಿದ ರೈಲ್ವೆ ಪೊಲೀಸರು

railway police station
ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಒಡವೆಗಳಿದ್ದ ಬ್ಯಾಗ್ ಅನ್ನು ಶಿವಮೊಗ್ಗ ರೈಲ್ವೆ ಪೊಲೀಸ್ ಸಿಬ್ಬಂದಿ ಸ್ಫೂರ್ತಿ ಅವರಿಗೆ ಹಸ್ತಾಂತರಿಸಿದರು.
Published on

ಶಿವಮೊಗ್ಗ: ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ರೈಲ್ವೆ ಪೊಲೀಸರು ಸುರಕ್ಷಿತವಾಗಿ ವಾರಸುದಾರರಿಗೆ ತಲುಪಿಸಿದ್ದಾರೆ.

ಭದ್ರಾವತಿಯ ಸ್ಫೂರ್ತಿ ಎಂಬುವರು ಸಾಗರದ ತವರುಮನೆಗೆ ತೆರಳುತ್ತಿದ್ದರು. ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ತಾಳಗುಪ್ಪ ಇಂಟರ್‌ಸಿಟಿ ರೈಲು ಹತ್ತಿದ್ದರು. ಶಿವಮೊಗ್ಗ ತಲುಪುವ ಹೊತ್ತಿಗೆ ಬ್ಯಾಗ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಶಿವಮೊಗ್ಗ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೆ ಭದ್ರಾವತಿ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು.
ನಿಲ್ದಾಣದಲ್ಲಿ ಬ್ಯಾಗ್ ಪತ್ತೆ ಹಚ್ಚಿದ ಭದ್ರಾವತಿ ರೈಲ್ವೆ ಪೊಲೀಸರು ಅದನ್ನು ಶಿವಮೊಗ್ಗಕ್ಕೆ ತಲುಪಿಸಿದರು. ಸ್ಪೂರ್ತಿ ಅವರ ಬ್ಯಾಗ್‌ನಲ್ಲಿ 9 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್, ನೆಕ್ಲೇಸ್, ಬಳೆಗಳು ಇದ್ದವು. ರೈಲು ಹತ್ತುವ ಸಂದರ್ಭ ಒಡವೆ ಇದ್ದ ಬ್ಯಾಗ್ ಮರೆತಿದ್ದೆ. ರೈಲ್ವೆ ಪೊಲೀಸರು ಸುರಕ್ಷಿತವಾಗಿ ನನ್ನ ಬ್ಯಾಗ್ ಮತ್ತು ಒಡವೆಗಳನ್ನು ಒಪ್ಪಿಸಿದ್ದು ಅವರಿಗೆ ಧನ್ಯವಾದ ಅರ್ಪಿಸುತ್ತೇನೆಂದು ಸ್ಪೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net