

ವಿಜಯಪುರ: ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯ 81ನೇ ವರ್ಷಾಚರಣೆ ಆಚರಿಸಲಾಯಿತು.
ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಮಾತನಾಡಿ, ಮಹಾತ್ಮ ಗಾಂಧಿ ಅವರು 1942 ಆ. 9 ರಂದು ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಮುಂದೆ ಈ ಹೋರಾಟವೇ ಭಾರತ ಸ್ವಾತಂತ್ರೃ ಹೊಂದಲು ಬುನಾದಿಯಾಯಿತು. ಇದೇ ಹೋರಾಟದ ಫಲವಾಗಿ ಬ್ರಿಟಿಷರು ಭಾರತದಿಂದ ತೊಲಗಿದರೆಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷೆ ಕೆ.ಎಫ್. ಅಂಕಲಗಿ, ಕೆಪಿಸಿಸಿ ಕಿಸಾನ ಘಟಕದ ಉಪಾಧ್ಯಕ್ಷೆ ಡಿ.ಎಚ್. ಕಲಾಲ, ಮುಖಂಡರಾದ ವೈಜನಾಥ ಕರ್ಪೂರಮಠ, ಆರತಿ ಶಹಾಪುರ, ಶಬ್ಬೀರ ಜಾಗೀರದಾರ, ಅಬ್ದುಲ್‌ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ಡಾ. ಗಂಗಾಧರ ಸಂಬಣ್ಣಿ, ರಾಜಶೇಖರ ಯಡಹಳ್ಳಿ, ಜಮೀರ ಅಹ್ಮದ ಬಕ್ಷಿ, ವಿದ್ಯಾರಾಣಿ ತುಂಗಳ, ರಮೇಶ ಗುಬ್ಬೇವಾಡ, ನಿಂಗಪ್ಪ ಸಂಗಾಪುರ, ಆನಂದ ಜಾಧವ, ಬಾಪುಗೌಡ ಎಂ. ಪಾಟೀಲ (ವಡವಡಗಿ), ಎಂ.ಬಿ. ಮೇಡೆಗಾರ, ರಾಜೇಶ್ವರಿ ಚೋಳಕೆ, ಸಣ್ಣಪ್ಪಾ ತಳವಾರ, ಮೀರಾಸಾಬ ಮುಲ್ಲಾ, ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಅಷ್ಫಾಕ್ ಮನಗೂಳಿ ಮತ್ತಿತರರಿದ್ದರು.