ಕಿತ್ತೂರು ರಾಣಿ ಚನ್ನಮ್ಮ ಅಪ್ರತಿಮ ದೇಶಪ್ರೇಮಿ

DVD Manavi
ದೇವದುರ್ಗದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಶಿರಸ್ತೇದಾರ್ ಭೀಮರಾಯ ಮೇಟಿ, ಗ್ರೇಡ್ ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ದೇವರೆಡ್ಡಿ ಇತರರಿದ್ದರು.
Published on

ದೇವದುರ್ಗ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ಸಂಸ್ಥಾನದ ಮಹಾರಾಣಿ ಚನ್ನಮ್ಮ ಅಪ್ರತಿಮ ದೇಶಪ್ರೇಮಿಯಾಗಿದ್ದರು. ಅವರ ಸಾಹಸ, ದೇಶ ಭಕ್ತಿ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಕಿತ್ತೂರು ಸಂಸ್ಥಾನದ ರಕ್ಷಣೆ, ನಾಡು ನುಡಿ, ನೆಲ ಜಲದ ಉಳಿವಿಗಾಗಿ ಚನ್ನಮ್ಮ ಜೀವನವನ್ನೇ ಮುಡುಪಾಗಿ ಇರಿಸಿದ್ದರು. ಅವರ ಸಾಹಸಮಯ ಜೀವನ ಪ್ರತಿಯೊಬ್ಬ ಮಹಿಳೆಯರಿಗೂ ಪ್ರೇರಣೆಯಾಗಿದೆ. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಶಿರಸ್ತೇದಾರ್ ಭೀಮರಾಯ ಮೇಟಿ, ಗ್ರೇಡ್ ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ದೇವರೆಡ್ಡಿ, ನೌಕರರಾದ ಪ್ರವೀಣ್ ಕುಮಾರ, ಅಭಿಷೇಕ್ ರೆಡ್ಡಿ, ಉಮೇಶ, ಶ್ರೀಶೈಲ, ರವಿ, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net