

ಮಡಿಕೇರಿ: ಎನ್‌ಎಸ್‌ಎಸ್ ಶಿಬಿರದಿಂದ ಕಲಿತ ಗುಣಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ ಜೀವನ ಪರ್ಯಂತ ಆಚರಿಸುವಂತಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎ.ಪಿ.ದನಂಜಯ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದ ಸೇವೆಗೆ ಸಿದ್ಧರಾಗಿರುವ ನಿಮ್ಮಂತಹ ವಿದ್ಯಾರ್ಥಿಗಳಿಂದ ಸಾಧ್ಯ. ವಿದ್ಯಾರ್ಥಿಗಳು ತಾಳ್ಮೆ, ಸಹನೆ ಮತ್ತು ಸಮಸ್ಯೆಗಳನ್ನು ಎದುರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಜತೆಗೆ ಎನ್‌ಎಸ್‌ಎಸ್ ಶಿಬಿರದಿಂದ ಕಲಿತ ಗುಣಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ ಜೀವನ ಪರ್ಯಂತ ಆಚರಿಸುವಂತಾಗಬೇಕು ಎಂದು ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ ವಹಿಸಿದ್ದರು. ಶಿಬಿರಾಧಿಕಾರಿ ಚಿದಾನಂದ, ಪ್ರಮುಖರಾದ ಬಿ.ಡಿ.ಲಿಂಗಪ್ಪ ರೈ, ಯಮುನಾ, ಸುರೇಂದ್ರ ಕುಮಾರ್ ಇತರರು ಹಾಜರಿದ್ದರು.