ಪ್ರತಿಭಾನ್ವೇಷಣೆಯೇ ಕಾರಂಜಿಯ ಉದ್ದೇಶ

KARANJI
Published on

ಡಂಬಳ: ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿನ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಸಜ್ಜನರ ಹೇಳಿದರು.

ಶಿರೂರ ಗ್ರಾಮದ ಎಚ್‌ಪಿಕೆಎಸ್ ಶಾಲೆಯಲ್ಲಿ ಜರುಗಿದ ಪೇಠಾಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಆರ್‌ಪಿ ಜಿ.ಕೆ. ವಸ್ತ್ರದ ಮಾತನಾಡಿ, ‘ಕಲಾತ್ಮಕ ಪ್ರತಿಭೆಗಳನ್ನು, ಸೃಜನಾತ್ಮಕ ಕೌಶಲಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ ಎಂದರು.

ಮುಖ್ಯ ಶಿಕ್ಷಕ ಎಸ್.ಎಫ್.ಹಡಪದ ಸ್ವಾಗತಿಸಿದರು, ಶಿಕ್ಷಕ ಜಗದೀಶ ಗುಳಾರಿ ನಿರೂಪಿಸಿದರು, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪೂಜಾರ, ಮಲ್ಲಪ್ಪ ಗೊಸಲದ, ಶರಣಪ್ಪ ಸುಂಕದ, ಹನಮಂತ ಮುರುಡಿ, ಹನಮಂತ ಅಳವಂಡಿ, ಗಂಗಮ್ಮ ಪೂಜಾರ, ಅಕ್ಕಮಹಾದೇವಿ ಹೊಂಬಳ, ಮಾದೇವಿ ಹೂಗಾರ, ಸುಜಾತಾ ಚನ್ನದಾಸರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net