

ಪರಶುರಾಮಪುರ: ಧಾರ್ಮಿಕ ಕಾರ್ಯಗಳು ಗ್ರಾಮದ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಸಾಮರಸ್ಯ ಉಂಟು ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸದ ವಿಶೇಷ ಪೂಜಾ ಮಹೋತ್ಸವದಲ್ಲಿ ಮಾತನಾಡಿದರು.
ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಚಂದ್ರರೆಡ್ಡಿ, ಅರ್ಚಕ ಗುರುನಾಥಭಟ್, ನಗರಸಭೆ ಸದಸ್ಯ ರಾಘವೇಂದ್ರ, ನಾಗರಾಜು, ಮಂಜುನಾಥ, ಚಲುಮೇಶ, ರಂಗನಾಥ, ಸುರೇಶ, ಅಂಜನಕುಮಾರ, ನಾಗರಾಜ್, ಹೇಮಂತಕುಮಾರ, ನರಸಿಂಹಪ್ಪ, ಅವಿನಾಶ, ವೆಂಕಟೇಶ, ವೀರಣ್ಣ ಇದ್ದರು.