

ಕೆರೂರ: ಮರಗಳನ್ನು ನೆಟ್ಟು ಭೂಮಿಯ ಅವನತಿ ತಡೆಯುವುದೇ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಮ್ಮನ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಮಾನವನ ದುರಾಸೆಯಿಂದ ಸಾಕಷ್ಟು ಗಿಡಗಳು ನಾಶವಾಗಿವೆ. ಭೂಮಿ ಮೇಲಿನ ಸಕಲ ಜೀವಿಗಳ ಒಳಿತಿಗಾಗಿ ಗಿಡಗಳನ್ನು ನೆಡುವುದು ಅತ್ಯಗತ್ಯ ಎಂದರು.
ಪಪಂ ಇಂಜಿನಿಯರ್ ಎಂ.ಎ. ಹೊಸಮನಿ ಮಾತನಾಡಿ, ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನ ಸಂರಕ್ಷಿಸುತ್ತದೆ. ಭೂಮಿ ಮರುಭೂಮಿಯಾಗುವುದನ್ನು ತಡೆಯಲು ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ಗಿಡಗಳನ್ನು ನೆಡಬೇಕು ಎಂದು ಹೇಳಿದರು.
ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಮುಖಂಡರಾದ ಸದಾನಂದ ಮದಿ, ಸುರೇಶ ಪೂಜಾರ, ಸಿಬ್ಬಂದಿಗಳಾದ ನವೀನ ಮಾಹಜನ್ನವರ, ಬಸವರಾಜ ಕಟ್ಟಿಮನಿ, ಜಿ. ಎ. ನದಾಫ್, ಅನಿಲ ಕಪಾಟೆ, ಅಶ್ವತ್ ರಂಗನಗೌಡ್ರ, ಸಂಗಮೇಶ ಮಾದರ, ಗೀತಾ ಕಲಗುಡಿ, ಮಂಜುಳಾ ಹಿರೇಮಠ ಇತರರಿದ್ದರು.