ಶರಣಬಸವೇಶ್ವರರ ಪುರಾಣ ಮಂಗಲ

VV DIGITAL
Published on

ಬೆಳವಣಿಕಿ(ತಾ.ರೋಣ): ಪ್ರವಚನ ಆಲಿಸುವುದರಿಂದ ಮನಸು ಶುದ್ಧಿಯಾಗಿ, ಒಳ್ಳೆಯ ಕಾರ್ಯದಲ್ಲಿ ತೊಡಗಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.

ಸಮೀಪದ ಮಲ್ಲಾಪೂರ ಗ್ರಾಮದ ಕದಳಿ ಮಠದಲ್ಲಿ ಕಲ್ಲಿನಾಥ ಕವಿ ವಿರಚಿತ 8ನೇ ವರ್ಷದ ಮಹಾಮಹಿಮ ಪರಮ ದಾಸೋಹಿ ಶರಣಬಸವೇಶ್ವರರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಧರ್ಮಸಭೆ, ಸಾಮೂಹಿಕ ವಿವಾಹ, ಪುರಾಣ ಮಂಗಲೋತ್ಸವದಲ್ಲಿ ಅವರು ಮಾತನಾಡಿ, ಮಠದ ಜೀರ್ಣೋದ್ಧಾರ, ರಥ ನಿರ್ಮಾಣ ಹಾಗೂ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಗ್ರಾಮಸ್ಥರು ತನು, ಮನ, ಧನವನ್ನು ಸಮರ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ವೇ.ಮೂ. ಗುರುಮಲ್ಲಯ್ಯ ಪುರಾಣಿಕಮಠ, ವೇದಮೂರ್ತಿ ಬಸಯ್ಯಶಾಸ್ತ್ರಿ ಭಿಕ್ಷಾವತಿಮಠ, ರೇವಣಸಿದ್ಧಯ್ಯ ತಾತನವರು ಅರಳಿಹಳ್ಳಿ, ಎಸ್.ಎಸ್. ಅರಹುಣಶಿ, ಶಂಕ್ರಪ್ಪ ಕಳಿಗೊಣ್ಣವರ, ಸುರೇಶ ಒತ್ತಟ್ಟಿ, ಶ್ರೀಶೈಲಪ್ಪ ಸತ್ತಿಗೇರಿ, ಮುತ್ತಪ್ಪ ಉಗಲವಾಟ, ನೆಹರು ಕಂಬಳಿ, ವಿರೂಪಾಕ್ಷಪ್ಪ ಚಳಗೇರಿ, ಶರಣಪ್ಪ ಗಾರವಾಡ, ಮುತ್ತಪ್ಪ ಕರಿಯಣ್ಣವರ ಪಾಲ್ಗೊಂಡಿದ್ದರು. ಕುಮಾರ ಯಂಡಿಗೇರಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net