ದೇಶದ್ರೋಹಿಗಳ ರಕ್ಷಣೆ ಸರಿಯಲ್ಲ

4 ಎಸ್ಕೆಪಿ 4t
ಶಿಕಾರಿಪುರ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ವೀರನಗೌಡ, ಬೆಣ್ಣೆ ಪ್ರವೀಣ್, ಲೋಕೇಶ್, ನಿರಂಜನ, ವೀರೇಶ್ ಪಾಟೀಲ್, ಸತೀಶ್ ಇತರರಿದ್ದರು.
Published on

ಶಿಕಾರಿಪುರ: ದೇಶವನ್ನು ಕಟ್ಟಬೇಕಾದ ಜನಪ್ರತಿನಿಧಿಗಳೇ ಭಾರತದ ವಿಭಜನೆ ಮಾಡುವ ದೇಶದ್ರೋಹದ ಮಾತುಗಳನ್ನಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶ ವಿಭಜನೆ, ಉಗ್ರವಾದ, ಪಾಕ್ ಪ್ರೇಮಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ರಾಷ್ಟ್ರ ವಿರೋಧಿ ನಿಲುವು ಖಂಡನೀಯ ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೀರಣ್ಣ ಗೌಡ ದೂರಿದರು.
ಸೋಮವಾರ ತಾಲೂಕು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಮಾತನಾಡಿ, ಶತಮಾನಗಳಿಂದಲೂ ನಡೆದ ಪರಕೀಯರ ದಾಳಿಯಿಂದ ದೇಶ ನಲುಗಿದೆ. ಇಂದು ಜಗತ್ತಿಗೆ ಭಾರತ ಹಿರಿಯಣ್ಣನಾಗಿ ಕಾಣುತ್ತಿದೆ. ದೇಶವು ಸದೃಢ ಹಾಗೂ ಸಶಕ್ತವಾಗಿದೆ. ವಿಭಜನೆ ಮಾತುಗಳನ್ನಾಡಿ ದೇಶ ಒಡೆಯುವ ಕೆಲಸ ಮಾಡುತ್ತಿರುವವ ವಿಚ್ಛಿದ್ರಕಾರಿ ಮನಸ್ಸುಗಳನ್ನು ಹತ್ತಿಕ್ಕಬೇಕಿದೆ ಎಂದು ಹೇಳಿದರು.
ದೇಶ, ರಾಷ್ಟ್ರೀಯತೆ, ಅಖಂಡತೆ ಮೊದಲು. ಭಾರತದ ಅಸ್ಮಿತೆಗೆ ತೊಂದರೆ ಮಾಡುವುದು ಸರಿಯಲ್ಲ. ಸುಭದ್ರ ಭಾರತ, ಸುರಕ್ಷಿತ ಕರ್ನಾಟಕಕ್ಕಾಗಿ ಈ ತಿರಂಗಾ ಯಾತ್ರೆ ನಡೆಯುತ್ತಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್, ವಿಶೇಷ ಆಹ್ವಾನಿತ ಲೋಕೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನಿರಂಜನ, ತಾಲೂಕು ಉಪಾಧ್ಯಕ್ಷ ವೀರೇಶ್ ಪಾಟೀಲ್, ಸತೀಶ್, ದೇವರಾಜ್, ನಗರ ಅಧ್ಯಕ್ಷ ಪ್ರಶಾಂತ್, ನಗರ ಪ್ರಧಾನ ಕಾರ್ಯದರ್ಶಿ ರಾಜು, ಯುವರಾಜ್, ಗಗನ್, ಪೃಥ್ವಿ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net