

ಜಿ.ನಾಗರಾಜ್ ಬೂದಿಕೋಟೆ: ಕೋಲಾರ ಜಿಲ್ಲೆ ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಕದಂಬ, ಪಲ್ಲವ, ಗಂಗರು, ಚಾಲುಕ್ಯ, ನೊಳಂಬ, ರಾಷ್ಟ್ರಕೂಟ, ಹೊಯ್ಸಳ ಸೇರಿ ಮೈಸೂರು ರಾಜ ವಂಶಸ್ಥರ ಆಳ್ವಿಕೆಯಲ್ಲಿತ್ತು. ಇಂತಹ ಇತಿಹಾಸಕ್ಕೆ ಸಾಯಾಗಿರುವ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀರಗಲ್ಲುಗಳು ಕಾಣಿಸುತ್ತವೆ. ಇವೆಲ್ಲವುಗಳ ಸಂರಕ್ಷಣೆ ಜರೂರು ಅಗತ್ಯವಾಗಿದೆ.
ಇತಿಹಾಸ ಸಾರುವ ವೀರಗಲ್ಲುಗಳು, ಶಿಲಾಶಾಸನಗಳು ಜಿಲ್ಲೆಯ ಹಲವು ಕಡೆ ಇದೆಯಾದರೂ ಅವುಗಳ ಸಂರಣೆ ಮಾಡುತ್ತಿರುವುದು ಕೆಲವು ಕಡೆ ಮಾತ್ರ. ಉಳಿದ ಹಲವೆಡೆ ಅವುಗಳನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಮುಂದಿನ ತಲೆಮಾರಿಗೆ ಹಾಗೂ ಇತಿಹಾಸ ಅಧ್ಯಯನಕಾರರಿಗೆ ಅವುಗಳನ್ನು ರಣೆ ಮಾಡಲು ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಮುಂದಾಗಬೇಕಿದೆ.
ಏನಿದು ವೀರಗಲ್ಲು?: ಯುದ್ಧದಲ್ಲಿ ವೀರನೊಬ್ಬ ವೀರ ಮರಣ ಹೊಂದಿದ ಸಂಕೇತವಾಗಿ ವೀರಗಲ್ಲುಗಳನ್ನು ಸ್ಥಾಪಿಸಲಾಗುತ್ತಿತ್ತು. ಕದಂಬರ ಕಾಲದಿಂದಲೂ ಇವುಗಳನ್ನು ಸ್ಥಾಪಿಸುವ ವಾಡಿಕೆ ಇದೆ. ಯೋಧನ ಪರಾಕ್ರಮವನ್ನು ಕಲ್ಲಿನಿಂದ ಕೆತ್ತಿ ತೋರಿಸಲಾಗಿದೆ. ಜತೆಗೆ ಅದರ ಕೆಳಭಾಗದಲ್ಲಿ ಶಾಸನ ಸಹ ಕೆತ್ತಲಾಗುತ್ತದೆ. ಇಷ್ಟಲ್ಲದೇ ಗ್ರಾಮದ ರಕ್ಷಣೆ, ಅಪಹರಣಕಾರರಿಂದ ಗೋವುಗಳ ರಕ್ಷಣೆಯಲ್ಲಿ ಮರಣ ಹೊಂದಿದರೆ, ಹೆಂಗಸರ ಮಾನ ರಕ್ಷಣೆ ಸೇರಿ ಇತರ ಕಾರಣಗಳಿಂದ ವೀರರು ವೀರೋಚಿತವಾಗಿ ಮೃತಪಟ್ಟಾಗ ಅವರ ನೆನಪಿಗಾಗಿ ವೀರಗಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಇಂತಹ ವೀರಗಲ್ಲುಗಳು ಜಿಲ್ಲೆಯ ಹುನ್ಕುಂದ, ಅರಾಭಿಕೊತ್ತನೂರು, ದೊಡ್ಡ ಶಿವಾರ ಸೇರಿ ಇತರ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತವೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಹೈದರಾಲಿಯ ಜನ್ಮ ಸ್ಥಳವಾದ ಬೂದಿಕೋಟೆಯಲ್ಲೂ ಕೆಲವೇ ಕೆಲವು ವೀರಗಲ್ಲುಗಳು ಕಂಡುಬರುತ್ತಿವೆಯಾದರೂ ರಕ್ಷಣೆಗೆ ಯಾರೊಬ್ಬರೂ ಕಾಳಜಿ ತೋರುತ್ತಿಲ್ಲ.
ನರೇಗಾ ರಣೆ
ಬಂಗಾರಪೇಟೆ ತಾಲೂಕು ಹುನ್ಕುಂದ ಗ್ರಾಮದಲ್ಲಿ ಪಂಚಾಯಿತಿಯಿಂದ ಕೈಕೊಂಡಿದ್ದ ಕಾಮಗಾರಿ ವೇಳೆ ಕದಂಬರು, ಗಂಗರು ಮತ್ತು ನೊಳಂಬರ ಕಾಲದ ಸುಮಾರು 21 ವೀರಗಲ್ಲುಗಳು ಪತ್ತೆಯಾಗಿವೆ. ಕೆಲ ಇತಿಹಾಸ ತರು ಮತ್ತು ಪರಂಪರೆ ಸಂರಣೆ ಬಗ್ಗೆ ಕಾಳಜಿ ಇದ್ದವರ ಆಸಕ್ತಿಯಿಂದ ನರೇಗಾ ಯೋಜನೆಯ ಮೂಲಕ ಅದನ್ನು ಸಂರಣೆ ಮಾಡಲಾಗಿದೆ. ಜತೆಗೆ ಕೋಲಾರ ತಾಲೂಕಿನ ಅರಾಭಿಕೊತ್ತನೂರು, ಮಾಲೂರು ತಾಲೂಕಿನ ದೊಡ್ಡಶಿವಾರ ಗ್ರಾಮದಲ್ಲಿ ಸಹ ನರೇಗಾ ಯೋಜನೆಯ ಮೂಲಕ ವೀರಗಲ್ಲುಗಳನ್ನು ರಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮುಂದೆ ಅಧ್ಯಯನ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಯಲು ಸಹಕಾರಿಯಾಗಲಿದೆ. ಆದರೆ ಜಿಲ್ಲೆಯ ಹತ್ತಾರು ಗ್ರಾಮಗಳಲ್ಲಿರುವ ಹಾಗೂ ವಿವಿಧ ರಾಜ ವಂಶಸ್ಥರ ಬಗ್ಗೆ ಇತಿಹಾಸ ಸಾರುವ ವೀರಗಲ್ಲುಗಳನ್ನು ರಣೆ ಮಾಡಲು ಮುಂದಾಗದಿರುವುದು ದುರ್ದೈವ.
ವೀರಗಲ್ಲು ನಾಶ: ಕೆಲವು ಗ್ರಾಮಗಳಲ್ಲಿ ವೀರಗಲ್ಲುಗಳ ಬಗ್ಗೆ ಇತಿಹಾಸ ಅರಿಯದ ಜನರು ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಮೂಲೆ ಗುಂಪು ಮಾಡಿದ್ದಾರೆ. ಬಹಳಷ್ಟು ಕಡೆ ವೀರಗಲ್ಲು ಇರುವ ಕಡೆ ನಿಧಿ ಇರುತ್ತದೆ ಎಂಬ ಕಲ್ಪನೆಯಿಂದ ಅವುಗಳನ್ನು ನಾಶ ಮಾಡಿದ್ದಾರೆನ್ನಲಾಗಿದೆ. ರಾಜ ಮಹಾರಾಜರ ಇತಿಹಾಸ ಸಾರುವ ವೀರಗಲ್ಲುಗಳನ್ನು ರಣೆ ಮಾಡಬೇಕಿರುವುದು ಪ್ರತಿಯೊಬ್ಬರ ಜವಾಬ್ದಾರಿ. ಜತೆಗೆ ರಣೆ ಇಲ್ಲದೆ ಮೂಲೆ ಗುಂಪಾಗಿರುವ ವೀರಗಲ್ಲುಗಳನ್ನು ಗುರುತಿಸಿ ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ರಣೆಗೆ ಮುಂದಾಗಬೇಕಿದೆ.
ಕೋಲಾರ ಜಿಲ್ಲೆಯ ಬೂದಿಕೋಟೆ, ಕುರ್ಕಿ, ಸೀಸಂದ್ರ, ಉತ್ತನೂರು, ಚಿನ್ನಕೋಟೆ, ಆವಣಿ ಸೇರಿ ಹತ್ತು ಹಲವು ಗ್ರಾಮಗಳಲ್ಲಿ ಪುರಾತನ ಶಿಲಾ ಶಾಸನಗಳಾದ ವೀರಗಲ್ಲುಗಳು ರಕ್ಷಣೆಯಿಂದ ವಂಚಿತವಾಗಿವೆ.
"ಜಿಲ್ಲೆಯಲ್ಲಿ 1,000 ಕ್ಕೂ ಹೆಚ್ಚಿನ ವೀರಗಲ್ಲುಗಳು ಕಾಣಸಿಗುತ್ತವೆ. ಅಬ್ಬಣಿ ಗ್ರಾಮದಲ್ಲಿ ಬೀರೇಶ್ವರ ದೇವಾಲಯದ ಬಳಿ ಸುಮಾರು 100 ವೀರಗಲ್ಲುಗಳನ್ನು ಕುರುಬ ಸಮುದಾಯದವರು ರಕ್ಷಣೆ ಮಾಡಿದ್ದಾರೆ. ಜತೆಗೆ ಜಿ.ಪಂ ಮೂಲಕ ಹುನ್ಕುಂದ, ಅರಾಭಿಕೊತ್ತನೂರು ಮತ್ತು ದೊಡ್ಡಶಿವಾರ ಗ್ರಾಮಗಳಲ್ಲಿ ರಕ್ಷಣೆ ಕಾರ್ಯ ನಡೆದಿದೆ. ರಾಜ್ಯಾದ್ಯಂತ ಇರುವಂತಹ ವೀರಗಲ್ಲುಗಳನ್ನು ಪಂಚಾಯಿತಿಗಳ ಮೂಲಕ ಸಂರಕ್ಷಣೆಗೆ ಮುಂದಾಗಬೇಕು."
- ಡಾ.ಶಿವಪ್ಪ ಅರಿವು, ಇತಿಹಾಸ ಪ್ರಾಧ್ಯಾಪಕ ಕೋಲಾರ
"ಪುರಾತನ ಶಾಸನಗಳನ್ನು ರಕ್ಷಣೆ ಮಾಡಬೇಕಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಬೆಂಗಳೂರು ವಿಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಸೇರಿ ಒಟ್ಟು 8 ಜಿಲ್ಲೆಗಳಲ್ಲಿ ಪುರಾತತ್ವ ಇಲಾಖೆೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸ್ಥಳಿಯ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಹಕಾರದಿಂದ ಪುರಾತನ ಕಲ್ಯಾಣಿ, ಕೋಟೆಗಳು, ಶಿಲಾ ಶಾಸನಗಳನ್ನು ರಕ್ಷಣೆೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ."
- ಎಂ.ಕಾವ್ಯಶ್ರೀ, ಉಪ ನಿರ್ದೇಶಕಿ ಪುರಾತತ್ವ ಇಲಾಖೆ