

ಮುಳಗುಂದ: ಎಲ್ಲಿಯವರೆಗೆ ದೇಶದಲ್ಲಿ ಉತ್ಪಾದನೆ ಮಾಡುವವರ ಮಾರುಕಟ್ಟೆ ಸೃಷ್ಟಿ ಆಗುವುದಿಲ್ಲವೋ, ಅಲ್ಲಿಯ ವರೆಗೂ ರೈತರ ಶೋಷಣೆ ತಪ್ಪುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸಮೀಪದ ಸೊರಟೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ಸಂಘದ ನೂತನ ಮಹಡಿ ಉದ್ಘಾಟಿಸಿ ಮಾತನಾಡಿದ ಅವರು, ನಿಸ್ವಾರ್ಥ ಸೇವಾ ಮನೋಭಾವದಿಂದ ಸಹಕಾರಿ ಸಂಘದ ಏಳಿಗೆ ಸಾಧ್ಯವಿದೆ. ಪತ್ತಿನ ಕೆಲಸದ ಜತೆಗೆ ರೈತರಿಗೆ ಎಲ್ಲ ರೀತಿಯ ಸಾಲ ಸೌಲಭ್ಯದ ನೆರವು ನೀಡುತ್ತಿರುವ ಸೊರಟೂರಿನ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಸಂಘದ ಅಧ್ಯಕ್ಷ ಎಂ.ಎಫ್. ಕಲಗುಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್ಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ನಿರ್ದೇಶಕ ಸಿ.ಎಂ. ಪಾಟೀಲ, ಎಂ.ಎಸ್. ಪಾಟೀಲ, ಜಿ.ಪಿ. ಪಾಟೀಲ, ಸಿ.ಬಿ. ಕರೇಕಟ್ಟಿ, ಸಿ.ಬಿ. ದೊಡ್ಡಗೌಡ್ರ, ಜಿ.ಕೆ. ಜಮಾದಾರ, ವಾಸಣ್ಣ ಕುರಡಗಿ ಭಾಗವಹಿಸಿದ್ದರು. ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.