ಸಂಘಟನಾತ್ಮಕ ಪ್ರಯತ್ನದಿಂದ ಸಂಘದ ಏಳಿಗೆ ಸಾಧ್ಯ

25 ಎಸ್ಕೆಪಿ 4b
ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಎಚ್.ಟಿ.ಬಳಿಗಾರ್ ಉದ್ಘಾಟಿಸಿದರು. ಕೆ.ಎಸ್ ಹುಚ್ರಾಯಪ್ಪ ,ಪರಶುರಾಮ್, ಹನುಮಂತಪ್ಪ, ಸುರೇಶ್, ಉಮೇಶ್, ಮಮತಾ ಸಾಲಿ, ಮಹಾದೇವಪ್ಪ ಇದ್ದರು.
Published on

ಶಿಕಾರಿಪುರ: ಸದ್ವಿಚಾರ ಮತ್ತು ಸಂಘಟನಾತ್ಮಕ ಪ್ರಯತ್ನದಿಂದ ಆರಂಭಿಸುವ ಸಂಸ್ಥೆಗಳು ಯಶಸ್ಸು ಕಾಣಲು ಸಾಧ್ಯ. ಆ ಯಶಸ್ಸಿನ ಹಿಂದೆ ದೃಢ ಸಂಕಲ್ಪದ ಶಕ್ತಿ ಇರುತ್ತದೆ ಎಂದು ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಹೇಳಿದರು.

ಭಾನುವಾರ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳಿಗೆ ಸದಸ್ಯರು ಹೆಚ್ಚು ಠೇವಣಿ ನೀಡುವುದು, ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡುವುದು ಸೇರಿ ಎಲ್ಲ ರೀತಿಯ ಮಾರ್ಗದರ್ಶನ ನೀಡಿದರೆ ಅತ್ಯುತ್ತಮ ಸಹಕಾರ ಸಂಘ ಎನಿಸಿಕೊಳ್ಳುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಷ್ಟದಲ್ಲಿದ್ದ ಸಂಘ ಮೂರನೇ ವರ್ಷದಲ್ಲಿ 3.27 ಕೋಟಿ ರೂ. ವ್ಯವಹಾರ ನಡೆಸಿದ್ದು 2.9 ಲಕ್ಷ ರೂ. ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದುವ ಉದ್ದೇಶ ಹೊಂದಿದ್ದು ಇದಕ್ಕೆ ದೇಣಿಗೆ ಸಂಗ್ರಹ ಆರಂಭವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಭೂಮಾಪನ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಟಿ.ರವೀಂದ್ರಪ್ಪ ಮಾತನಾಡಿ, ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು. ನಿವೃತ್ತ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ.ಎಚ್.ಪರಶುರಾಮ್, ಸಂಘದ ನಿರ್ದೇಶಕ ಎಚ್.ಹನುಮಂತಪ್ಪ , ಸಂಘದ ಉಪಾಧ್ಯಕ್ಷ ಡಿ.ಮಹದೇವಪ್ಪ, ನಿರ್ದೇಶಕರಾದ ಕೆ.ಎಚ್.ಹುಚ್ಚರಾಯಪ್ಪ, ವಿ.ಸುರೇಶ್, ಪಿ. ಎಲï. ಸುರೇಶ್, ಡಿ.ಉಮೇಶ್, ಕೆ .ಎಸ್ ದೇವೇಂದ್ರಪ್ಪ, ಮಮತಾ ಸಾಲಿ, ಅನ್ನಪೂರ್ಣಮ್ಮ , ಎ-ï.ಟಿ.ಜಗದೀಶ್, ಕರಿಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net