ಶಿಷ್ಯ ವರ್ಗ ಸಂಸ್ಥಾನದ ಆಸ್ತಿ

mahotsava
mahotsava
Published on

ಕುಂದಾಪುರ: ಶಿಷ್ಯ ವೃಂದದವರು ಶ್ರೀ ಸಂಸ್ಥಾನದ ಆಸ್ತಿ. ಸಮಾಜ ಎಂದಿಗೂ ಸಂಸ್ಥಾನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರಬೇಕು. ನಮ್ಮ ಪೂರ್ವಜರ ತ್ಯಾಗದೊಂದಿಗೆ ಉಳಿಸಿಕೊಂಡು ಬಂದ ಮೌಲ್ಯಗಳನ್ನು ಬೆಳೆಸಿಕೊಂಡು ಮುಂದುವರೆಸಬೇಕು. ನಮ್ಮ ಸಮಾಜ ಗಾತ್ರದಲ್ಲಿ ತುಂಬಾ ಸಣ್ಣದಾದರೂ ಸಂಘಟನೆ ಹಾಗೂ ಆಚರಣೆಯಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಸಂಪನ್ನದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀ ಕಾಶೀ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಮಾನೋತ್ಸವ ಹಿನ್ನೆಲೆ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ 100 ದಿನಗಳ ಅಖಂಡ ಭಜನೆ ಈಗಾಗಲೇ 50 ದಿನ ಪೂರೈಸಿದೆ. ರಾಜ್ಯ, ಹೊರ ರಾಜ್ಯದ ನೂರಾರು ಭಜನೆ ಮಂಡಳಿ ಹಾಗೂ ಕಲಾವಿದರು ಭಾಗವಹಿಸಿ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ವಿಜೃಂಭಣೆಯಿಂದ ನಡೆಯಲಿ ಎಂದು ಶ್ರೀಗಳು ಅನುಗ್ರಹಿಸಿದರು.

ಕರ್ನಾಟಕ, ಕೇರಳ, ಮಹಾರಾಷ್ಟ್ರದ 100ಕ್ಕೂ ಹೆಚ್ಚಿನ ಸವಾಜದ ದೇವಳದ ಆಡಳಿತ ಮಂಡಳಿ ಹಾಗೂ ಪ್ರತಿನಿಧಿಗಳು ಗುರುವರ್ಯರಿಗೆ ಹಾರಾರ್ಪಣೆ ವಾಡಿ ಆಶೀರ್ವಾದ ಪಡೆದರು. ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ ಜಿ. ಕಾಮತ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net