

ಮುಳಗುಂದ: ಸಮಾಜದಲ್ಲಿ ವೈದ್ಯ ವೃತ್ತಿ ಪವಿತ್ರವಾದುದು ಎಂದು. ಡಾ. ಎಸ್.ಸಿ. ಚವಡಿ ಹೇಳಿದರು.
ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ಹಾಗೂ ವಿಶ್ವಪತ್ರಿಕಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಭಾರತ ರತ್ನ ಡಾ. ಬಿ.ಸಿ. ರಾಯ್ ಅವರ ಜನ್ಮ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗಿತ್ತಿದೆ. ರಾಯ್ ಅವರು ತಮ್ಮ ವೈದ್ಯ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕ ಮತ್ತು ಬಡವರ ಸೇವೆಗಾಗಿ ಮುಡುಪಾಗಿಟ್ಟವರು ಎಂದರು.
ಅಲ್ಲದೆ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ. ಪರ್ತಕರ್ತರು ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಬೇಕು. ಮಕ್ಕಳು ದಿನ ಪತ್ರಿಕೆಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ರಾಜೇಶ್ವರಿ ಬಡ್ನಿ ಉಪನ್ಯಾಸ ನೀಡಿದರು. ಡಾ. ಐ.ಸಿ. ಪಾಟೀಲ, ಡಾ. ಪಿ.ಎಸ್. ಜಕ್ಕನಗೌಡ್ರ, ಡಾ. ಮಟ್ಟಿ, ವಿ.ಡಿ. ಕಣವಿ, ಚಂದ್ರಶೇಖರ ಭಜಂತ್ರಿ, ಎಂ.ಎಂ. ಜಮಾಲಸಾಬನವರ, ಮಹೇಶ ನೀಲಗುಂದ, ಮಹೇಶ ಛಬ್ಬಿ, ರಾಜು ಪಾಟೀಲ, ವಿ.ಡಿ. ಸಿದ್ದನಗೌಡ್ರ, ಬಿ.ಎಲ್. ಜಾಧವ, ಶಿಕ್ಷಕರಾದ ಮಂಜುನಾಥ ಮಟ್ಟಿ, ಮಹಾಂತೇಶ ನಪೂರಿಮಠ, ಮುತ್ತು ಹೆರಕಲ್ಲ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇತರರಿದ್ದರು.