ದೇಹ, ಮನಸು ಬೆಸೆಯುವ ಪ್ರಕ್ರಿಯೆ

21 mul-1
ಮುಳಗುಂದ ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಯದ ಮೈದಾನದಲ್ಲಿ ಜರುಗಿದ ಯೋಗ ದಿನಾಚರಣೆಯಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಯೋಗಾಸನ ಮಾಡಿದರು.
Published on

ಮುಳಗುಂದ: ಯೋಗವು ದೇಹ ಮತ್ತು ಮನಸುಗಳನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರಿಯೆ. ಯೋಗ ಭಾರತದಿಂದ ಪ್ರಪಂಚಕ್ಕೆ ಇದು ಬಹು ದೊಡ್ಡ ಕೊಡುಗೆ. ಮನಸು ಮತ್ತು ದೇಹದ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಸಹಕಾರಿಯಾಗಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಯದ ಮೈದಾನದಲ್ಲಿ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಹಾಗೂ ಜಿಲ್ಲಾ ಯುವ ಪ್ರಭಾರಿ ಪ್ರಕಾಶ ಮದ್ದಿನ ನೇತೃತ್ವದಲ್ಲಿ ಜರುಗಿದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಯುವ ಪ್ರಭಾರಿ ಪ್ರಕಾಶ ಮದ್ದಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿನೋದ, ಉನ್ನತಿ ಮಹಿಳಾ ಸಂಘದ ಅಧ್ಯಕ್ಷೆ ಮಂಗಳಾ ನೀಲಗುಂದ ಮಾತನಾಡಿದರು. ಮಹಾವಿದ್ಯಾಲಯದ ಚೇರ್ಮನ್ ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪರಶುರಾಮ ವಂಟಕರ, ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಂ. ಅಂಗಡಿ, ಹರ್ಷಲತಾ ದೇಶಪಾಂಡೆ, ಅಕ್ಕಮ್ಮ ನೀಲಗುಂದ, ಗೀತಾ ಜಾಧವ, ರೇಣುಕಾ, ಮಧು ಕೋರಿ, ಕವಿತಾ ದೋಟಿಕಲ್, ಭೀಮಪ್ಪ ಕೋಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net