

ಮುಳಬಾಗಿಲು: ಸರ್ಕಾರಿ ಕಚೇರಿಗಳ ನಿರ್ವಹಣೆ ಜತೆಗೆ ಸರ್ಕಾರಿ ಜವಾಬ್ದಾರಿಗಳನ್ನು ರ್ನಿಲಕ್ಷಿಸುವುದಕ್ಕೆ ಪ್ರತಿದಿನ ಹಲವು ಸ್ಪಷ್ಟ ಉದಾಹರಣೆಗಳು ಸಾರ್ವಜನಿಕವಾಗಿಯೇ ಕಾಣುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸದೆ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಮುಳಬಾಗಿಲು ನಗರಸಭೆಯ ವಾಹನಗಳಿಗೆ ಫಿಟ್ನೆಸ್ ಇದಿಯೋ ಇಲ್ಲವೋ ಎಂಬ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ, ಕಸ ಸಾಗಿಸುವ ಟ್ರಾ$್ಯಕ್ಟರ್ಗಳು ನಿಲ್ಲಿಸಿದರೆ ಮತ್ತೆ ಆನ್ ಆಗುವುದೇ ಉಲ್ಲ. ಪೌರಕಾರ್ಮಿಕರು ಕಸವನ್ನು ಟ್ರ್ಯಾಕ್ಟರ್ಗೆ ತುಂಬುವುದಲ್ಲದೆ, ಆನ್ ಆಗದ ವಾಹನಗಳನ್ನು ತುಳ್ಳುವ ಭಾಗ್ಯವನ್ನು ನಗರಸಭೆ ನೀಡಿದೆ.
ನಗರಸಭೆಯಲ್ಲಿರುವ 8 ಕಸ ತುಂಬುವ ಟ್ರ್ಯಾಕ್ಟರ್ಗಳಲ್ಲಿ 1 ರಿಪೇರಿಯಲ್ಲಿದ್ದು, ಉಳಿದ 7ರಲ್ಲಿ ಸ್ಟಾರ್ಟ್ ಆಗದ ವಾಹನಗಳೆ ಹೆಚ್ಚು, 11 ಆಟೋ ಟಿಪ್ಪರ್ಗಳಲ್ಲಿ ಹಳೆ ವಾಹನಗಳು ರಿಪೇರಿ ಸರ್ವೇ ಸಾಮಾನ್ಯ, ಹೊಸದಾಗಿ ಬಂದಿರುವ 3 ಎಲೆಕ್ಟ್ರಿಕ್ ಆಟೋ ಟಿಪ್ಪರ್ಗಳಿಗೆ ವಿಮೆ, ಆರ್ಟಿಒ ನೋಂದಣಿ ಸಂಖ್ಯೆ ಇನ್ನೂ ಆಗಿಲ್ಲ, ಯುಜಿಡಿ ಸ್ವಚ್ಛ ಮಾಡುವ ಎರಡು ಟಿಪ್ಪರ್ ಯಂತ್ರಗಳಲ್ಲಿ ಒಂದು ಕೆಟ್ಟಿದ್ದು, ಮತ್ತೊಂದು ಮಾತ್ರ ಜಗ್ಗಾಡುತ್ತಿದೆ. 2 ಜೆಸಿಬಿ ಯಂತ್ರಗಳಲ್ಲಿ ಒಂದು ದುರಸ್ತಿಗೆ ಬಂದಿದ್ದು, ಮತ್ತೊಂದು ದುಡಿಯುತ್ತಲೇ ಇದೆ. ಮಿನಿ ಜೆಸಿಬಿ ಒಂದಿದ್ದು, ನಗರದ ಸ್ವಚ್ಛತೆಗೆ ಇರುವ ಯಂತ್ರಗಳೇ ಸಾಕಾಗುತ್ತಿಲ್ಲ ಇದರಲ್ಲಿ ದುರಸ್ತಿಗೆ ಬಂದ ವಾಹನಗಳು, ಬಳಕೆಗೆ ಯೋಗ್ಯವಿರುವ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ವಿಮೆ ಇಲ್ಲದಿರುವುದು ಉಪ ಲೋಕಾಯುಕ್ತರು ಭೇಟಿ ವೇಳೆಯಲ್ಲಿ ಮಾಹಿತಿ ಹೊರಬಂದಿದ್ದು, ಇನ್ನಾದರೂ ನಗರಸಭೆ ಮತ್ತು ಜಿಲ್ಲಾಡಳಿತ ಎಚ್ಚೆತ್ತು ಸರ್ಕಾರಿ ಆಡಳಿತ ವ್ಯವಸ್ಥೆಗೆ ಚಿಕಿತ್ಸೆ ನೀಡಬೇಕಾಗಿದೆ.
ನಗರಸಭೆಗೆ ಸೇರಿದ 27 ವಾಹನಗಳಲ್ಲಿ 6 ಮೂಲೆ ಸೇರಿದ್ದು, ಉಳಿದ ವಾಹನಗಳು ಎಲ್ಲಿಂದರಲ್ಲಿ ನಿಂತರೆ ಮುಂದಕ್ಕೆ ಚಲಿಸುವುದು ಕಷ್ಟ ಕಷ್ಟ ಎನಿಸಿದೆ. ಮಳೆಗಾಲದಲ್ಲಿ ಮರಗಳಿಂದ ವಿದ್ಯುತ್ ಪ್ರವೇಶಿಸಿ ಅವಘಡಗಳು ಸಂಭವಿಸುವುದಕ್ಕಿಂತ ಮುಂಚೆ ನಗರಸಭೆ ಮತ್ತು ಬೆಸ್ಕಾಂ ಜಂಟಿಯಾಗಿ ಕ್ರಮ ಕೈಗೊಂಡು ಜನರು ಸೇರಿ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಾಗಿದೆ.
ಮರಗಳ ಮಧ್ಯದಲ್ಲಿ ವಿದ್ಯುತ್ ತಂತಿ
-ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಮರಗಳ ಮಧ್ಯೆ ವಿದ್ಯುತ್ ತಂತಿಗಳು ಇರುವುದು ಸರ್ವೇಸಾಮಾನ್ಯ. ಆದರೆ, ಮುಳಬಾಗಿಲು ನಗರದಲ್ಲೇ ಈ ಪರಿಸ್ಥಿತಿ ಹೆಚ್ಚಿದೆ. ಹಲವು ಕಡೆಗಳಲ್ಲಿ ಗಿಡ&ಮರಗಳಲ್ಲಿ ವಿದ್ಯುತ್ ತಂತಿಗಳು ಇರುವುದನ್ನು ಕಾಣಬಹುದು. ಇದಲ್ಲದೆ ವಿದ್ಯುತ್ ಪರಿವರ್ತಕಗಳಿಗೆ, ಕಂಬಗಳಿಗೆ, ತಂತಿಗಳಿಗೆ ಹಸಿರು ಬಳ್ಳಿಗಳು ಸುತ್ತಿಕೊಂಡರೂ ಕೇಳುವವರೇ ಇಲ್ಲದಂತಾಗಿದೆ.
=
ನಗರಸಭೆಯ ಎಲ್ಲ ವಾಹನಗಳ ಫಿಟ್ನೆಸ್ ಬಗ್ಗೆ ಆರ್ಟಿಒ ಅಧಿಕಾರಿಗಳಿಂದ ಪರಿಶೀಲಿಸಲು ಪತ್ರ ಬರೆಯಲಾಗುತ್ತದೆ. ಅವರ ಒಪ್ಪಿಗೆ ದೊರೆತ ತಕ್ಷಣ ವಿಮೆ ಮಾಡಿಸಿ ಆರ್ಟಿಒ ನವೀಕರಣ ಮಾಡಿಸಲಾಗುವುದು. ಹೊಸ ವಾಹನಗಳ ಬೇಡಿಕೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮರಗಳಲ್ಲಿ ವಿದ್ಯುತ್ ತಂತಿಗಳು ಇರೋ ಬಗ್ಗೆ ಬೆಸ್ಕಾಂಗೆ ಮಾಹಿತಿ ನೀಡಲಾಗುವುದು.
> ವಿ.ಶ್ರೀಧರ್
ಪೌರಾಯುಕ್ತ, ನಗರಸಭೆ, ಮುಳಬಾಗಿಲು
ನಗರದಲ್ಲಿ ಮರಗಳ ಮಧ್ಯೆ ಇರುವ ವಿದ್ಯುತ್ ತಂತಿಗಳನ್ನು ಪರಿಶೀಲನೆ ಮಾಡುವಂತೆ ಜೆಇ ಮತ್ತು ಸಿಬ್ಬಂದಿಗೆ ತಕ್ಷಣ ಸೂಚನೆ ನೀಡಿ ಟ್ರಿಮ್ಮಿಂಗ್ ಮಾಡಿ ರಂಬೆ ಕತ್ತರಿಸಿ ಸರಿಪಡಿಸಲಾಗುವುದು.
> ವಿ.ಎಂ. ರಮೇಶ್
ಎಇಇ, ಬೆಸ್ಕಾಂ, ಮುಳಬಾಗಿಲು