ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ವೈರಲ್ ಮಾಡಿದ್ದು‌ ಖಂಡನೀಯ, ಎಬಿವಿಪಿಯಿಂದ ಮನವಿ

28-Jaggu-6.jpg
Published on

ಬೆಳಗಾವಿ: ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಶೌಚಗೃಹದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ ವಿದ್ಯಾರ್ಥಿನಿಯರ ಕೃತ್ಯ ಖಂಡನೀಯ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಸೂಕ್ತ ತನಿಖೆ ನಡೆಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
 ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಬೇಕಾಗಿದ್ದ ಪೊಲೀಸರು ಇಲಾಖೆ, ಯಾವುದೋ ಒತ್ತಡಕ್ಕೆ ಮಣಿದು ಈ ಘಟನೆಯ ಸತ್ಯಾಸತ್ಯತೆ ಹೊರಬರದಂತೆ ತಡೆದಿದ್ದಾರೆ. ನಾಗರಿಕ ಸಮಾಜದ ತೀವ್ರ ವಿರೋಧ ಮತ್ತು ಎಬಿವಿಪಿ ತೀವ್ರ ಹೋರಾಟದ ನಂತರ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಹಿಂದೆ ಜಿಹಾದಿಗಳ ಕೈವಾಡವಿದ್ದು, ಈ ರೀತಿ ವಿಡಿಯೋಗಳನ್ನು ಚಿತ್ರೀಕರಿಸಿ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಂತಹ ಕೂಪಕ್ಕೆ ತಳ್ಳುವ ಷಡ್ಯಂತ್ರಗಳು ಈ ಘಟನೆ ಮೂಲಕ ವ್ಯಕ್ತವಾಗುತ್ತಿದ್ದು, ಪೋಷಕರು ವಿದ್ಯಾರ್ಥಿನಿಯರನ್ನು ವಿದ್ಯಾಭ್ಯಾಸ ಮಾಡಿಸಲು ಆತಂಕಕ್ಕೊಳಗಾಗಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೇ ಸೂಕ್ತ ರೀತಿಯ ತನಿಖೆಗೆ ಒಳಪಡಿಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
 ಪ್ರೀತಮ ಉಪರಿ, ರೋಹಿತ ಅಲಕುಂಟೆ, ಕೀರ್ತಿ ರೇವಣಕರ, ದರ್ಶನ ಹೆಗಡೆ, ಅಮೋಲ ಕಾವೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net