ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕಡಿಮೆಯಾಗುತ್ತಿದೆ ಪ್ರಾಶಸ್ತ್ಯ

22-GPT-1
ಗುಂಡ್ಲುಪೇಟೆ ತಾಲೂಕಿನ ಸಂಪಿಗೆಪುರ ಗ್ರಾಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಾನಾ ಕ್ಷೇತ್ರದಗಳ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುಲಿಂಗಪ್ಪ, ಈಶ್ವರ, ಗುರುಸಿದ್ದಸ್ವಾಮೀಜಿ, ವೈ.ಟಿ.ಕೃಷ್ಣೇಗೌಡ, ಡಾ. ಪಳನಿಸ್ವಾವಿ, ಡಾ.ಎಚ್.ಗುರುಮೂರ್ತಿ, ಎಚ್.ಎಸ್. ಪ್ರಸಾದ್, ಜಿ.ಜಿ. ಗುರುಪ್ರಸಾದ್, ಷಡಕ್ಷರಸ್ವಾಮಿ ಇದ್ದರು.
Published on

ಗುಂಡ್ಲುಪೇಟೆ : ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕಡಿಮೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಬಾಲ್ಯವಿವಾಹಗಳು ಹೆಚ್ಚು ಕಂಡುಬರುತ್ತವೆ ಎಂದು ಚಾಮರಾಜನಗರದ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಸಂಪಿಗೆಪುರ ಗ್ರಾಮದಲ್ಲಿ ಭಾನುವಾರ ಗುರುಲಿಂಗಪ್ಪ ಮತ್ತು ಪಾರ್ವತಮ್ಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಸವರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕಾಗಿದ್ದರೂ ಪಾಲಕರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿಲ್ಲ. 18 ವರ್ಷಗಳ ಒಳಗಿನ ಮಕ್ಕಳಿಗೆ ವಿವಾಹ ಮಾಡಿದರೆ ಅದು ಬಾಲ್ಯವಿವಾಹ ನಿಷೇಧ ಕಾಯ್ದೆಯ ಪ್ರಕಾರ ಅಪರಾಧವಾಗುತ್ತದೆ. 18 ವಯಸ್ಸಿನ ಒಳಗಿನ ಗಂಡು ಮಕ್ಕಳನ್ನು ಕೂಲಿ ಅಥವಾ ಇತರ ಕೆಲಸಗಳಿಗೆ ಬಳಸಿಕೊಂಡರೆ ಬಾಲಕಾರ್ಮಿಕ ವಿರೋಧಿ ಕಾನೂನಿನ ಅನ್ವಯ ಕೆಲಸಕ್ಕೆ ನೇಮಕ ಮಾಡಿಕೊಂಡವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದರು.

ಕಬ್ಬಹಳ್ಳಿ ಪಟ್ಟದ ಮಟ್ಟದ ಶ್ರೀ ಗುರುಸಿದ್ದಸ್ವಾಮೀಜಿ, ತಾಂಡವಪುರದ ಎಂಐಟಿ ಕಾಲೇಜಿನ ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ, ಕಾರ್ಯಕ್ರಮದ ಆಯೋಜಕ ಜಿ.ಷಡಕ್ಷರಸ್ವಾಮಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳು, ನಿವೃತ್ತ ಐಆರ್‌ಎಸ್ ಅಧಿಕಾರಿ ಜಿ.ನಾರಾಯಣಸ್ವಾಮಿ ಮತ್ತು ಕೇಂದ್ರ ಗೃಹ ಸಚಿವಾಲಯದ ಐಸಿಎಎಸ್ ಅಧಿಕಾರಿ ಪ್ರಮೋದ್ ಆರಾಧ್ಯ ಇವರಿಗೆ ’ಬಸವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶೈಲ ಕುಮಾರ್, ಸಂಶೋಧಕ ಡಾ. ಪಳನಿ ಸ್ವಾಮಿ ಮೂಡುಗೂರು, ಪಶುವೈದ್ಯಾಧಿಕಾರಿ ಡಾ.ಎಚ್. ಗುರುಮೂರ್ತಿ, ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಎಚ್.ಎಸ್. ಪ್ರಸಾದ್, ಪ್ರಗತಿಪರ ಕೃಷಿಕ ಜಿ.ಜಿ. ಮಲ್ಲಿಕಾರ್ಜುನಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷ ಶಿವ ವೀರಭದ್ರಪ್ಪ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net